ಬೆಳ್ತಂಗಡಿ: ಶಿವಮೊಗ್ಗ ಜೈಲಿನಲ್ಲಿರುವ ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತಿಟ್ಟಿದ್ದೆ ಎಂದು ಹೇಳಿದ್ದ ಚಿನ್ನಯ್ಯನಿಗೆ ದ. ಕ ಜಿಲ್ಲಾ ಕೋರ್ಟ್ ನ.24 ರಂದು 12 ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ಕೊರತೆಯಿಂದ 23 ದಿನಗಳಿಂದ ಬಿಡುಗಡೆ ಭಾಗ್ಯ ದೊರಕಿರಲಿಲ್ಲ.
ಆದರೆ ಚಿನ್ನಯ್ಯನ ಪತ್ನಿ ಮಲ್ಲಿಕಾ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಒಂದು ಲಕ್ಷ ರೂ. ಬಾಂಡ್ ತಂದಿದ್ದರು. ಜೊತೆಗೆ ಇಬ್ಬರು ಜಾಮೀನುದಾರರನ್ನು ಕರೆದುಕೊಂಡು ಬಂದು ಕಾನೂನು ಪ್ರಕ್ರಿಯೆ ಮುಗಿಸಿದ ಪರಿಣಾಮ ಚಿನ್ನಯ್ಯನಿಗೆ ಡಿ.17ರಂದು ಜಾಮೀನು ಭಾಗ್ಯ ದೊರೆತಿದೆ.
ಜಾಮೀನು ಪಡೆದ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಶಿವಮೊಗ್ಗ ಜೈಲಿನತ್ತ ಪ್ರಯಾಣಿಸಿದ್ದಾರೆ. ಇನ್ನು ಬೆಳ್ತಂಗಡಿ ನ್ಯಾಯಾಲಯದಲ್ಲಿ ಬಿಡುಗಡೆ ಆದೇಶ ಪತ್ರ ಮೇಲ್ ಮೂಲಕ ಶಿವಮೊಗ್ಗ ಜೈಲಿಗೆ ತಲುಪಲಿದೆ. ಆದ್ದರಿಂದ ಚಿನ್ನಯ್ಯ ಡಿ. 17ರಂದು ಸಂಜೆ ವೇಳೆಗೆ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
PublicNext
17/12/2025 05:19 pm
LOADING...