ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಭವಿಷ್ಯಕ್ಕೆ ರಕ್ಷಾಕವಚ : ಪಲ್ಸ್ ಪೋಲಿಯೊ ಅಭಿಯಾನಕ್ಕೆ ಸಿದ್ಧತೆ ಆರಂಭ!

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ–2025 ಕುರಿತ ಪೂರ್ವ ಸಿದ್ಧತಾ ಸಭೆಯನ್ನು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಸಲಾಯಿತು.

ಸಭೆಯಲ್ಲಿ ಡಿಸೆಂಬರ್ 21 ರಿಂದ ಡಿಸೆಂಬರ್ 24, 2025 ರವರೆಗೆ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಸಮಗ್ರ ಸಿದ್ಧತೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಅಗತ್ಯ ಸೂಚನೆಗಳನ್ನು ಆಯುಕ್ತರು ನೀಡಿದರು.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಒಟ್ಟು ಜನಸಂಖ್ಯೆ 24,55,245 ಆಗಿದ್ದು, ಈ ಅಭಿಯಾನದಡಿ ಐದು ವರ್ಷದೊಳಗಿನ 2,70,297 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. ಅಭಿಯಾನದ ಮೊದಲ ದಿನ ಬೂತ್ ಚಟುವಟಿಕೆ ಮೂಲಕ 726 ಬೂತ್‌ಗಳಲ್ಲಿ ಲಸಿಕಾ ಕಾರ್ಯ ನಡೆಯಲಿದ್ದು, ನಂತರದ ಮೂರು ದಿನಗಳಲ್ಲಿ ಮನೆ–ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಇದಲ್ಲದೆ, ಮಾಲ್‌ಗಳು, ಸಿನಿಮಾ ಮಂದಿರಗಳು, ಧಾರ್ಮಿಕ ಸ್ಥಳಗಳು, ಕಾರ್ಯಾಗಾರ ಮಂದಿರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳನ್ನು ಒಳಗೊಳ್ಳಲು 101 ಟ್ರಾನ್ಸಿಟ್ ತಂಡಗಳನ್ನು ನಿಯೋಜಿಸಲಾಗುತ್ತದೆ. ಈ ವೇಳೆ ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಆರೋಗ್ಯಾಧಿಕಾರಿಯಾದ ಡಾ. ಸುರೇಂದ್ರ ಸೇರಿದಂತೆ ಇತರೆ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.

Edited By : Vinayak Patil
Kshetra Samachara

Kshetra Samachara

17/12/2025 08:54 pm

Cinque Terre

720

Cinque Terre

0

ಸಂಬಂಧಿತ ಸುದ್ದಿ