ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಕೆಂಭಾವಿ ಆಸ್ಪತ್ರೆ ಕಾಮಗಾರಿ ಗುತ್ತಿಗೆದಾರನ ಆವಾಂತರ; ರೋಗಿಗಳ ಪರದಾಟ

ಯಾದಗಿರಿ: ಆಸ್ಪತ್ರೆ ಎಂದ್ರೆ ಜನ್ರ ಜೀವನಕ್ಕೆ ಸಂಜೀವಿನಿ ಧಾಮದಂತೆ. ಆದ್ರೆ, ಕೆಂಭಾವಿ ಪಟ್ಟಣದ ಸಮುದಾಯ ಆಸ್ಪತ್ರೆ ಮಾತ್ರ ಬರುವ ರೋಗಿಗಳ ಪಾಲಿಗೆ ರೋಗ ಬರಿಸುವ ತಾಣವಾಗಿ ಮಾರ್ಪಟ್ಟಿದ್ದು, ಆಸ್ಪತ್ರೆಗೆ ಬರಲು ಜನ್ರು ಭಯ ಪಡುವಂತಾಗಿದೆ.

ಆಸ್ಪತ್ರೆ ಮೇಲ್ಭಾಗ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಆಸ್ಪತ್ರೆಯಲ್ಲಿ ಕಲ್ಲು ,ಉಸುಕು,ಸಿಮೆಂಟ್ ,ಜಲ್ಲಿಕಲ್ಲುಗಳಿಂದ ಸಂಪೂರ್ಣ ಧೂಳುಮಯವಾಗಿದೆ. ಗುತ್ತಿಗೆದಾರನ ಆವಾಂತರಕ್ಕೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಕಿಂಚಿತ್ತೂ ಪಾಲನೆ ಮಾಡದೇ ಕಾಮಗಾರಿ ಮಾಡುತ್ತಿದೆ. ಕೆಂಭಾವಿ ವಲಯದ ಬಹುತೇಕ ಗ್ರಾಮಗಳು ಇದೇ ಆಸ್ಪತ್ರೆಯನ್ನು ಅವಲಂಬಿಸಿದೆ. ಆದ್ರೆ, ಇಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಖಾಸಗಿ ಕಂಪನಿ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಅವೈಜ್ಞಾನಿಕವಾಗಿದೆ.

ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಕೂಡ ಏನೂ ಮಾಡಲಾಗದೆ ಅಸಹಾಯಕತೆಗೆ ಒಳಗಾಗಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರವಾದ್ದರಿಂದ ದಿನನಿತ್ಯ 500 ರಿಂದ 1000 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ನಿತ್ಯ 10ಕ್ಕೂ ಅಧಿಕ ಹೆರಿಗೆ ಆಗುತ್ತವೆ. ಸಿಮೆಂಟ್ ಹಾಗೂ ಜಲ್ಲಿ ,ಉಸುಕಿನ ಧೂಳಿನಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಇದ್ಯಾವುದರ ಅರಿವು ಇಲ್ಲದ ಗುತ್ತಿಗೆದಾರ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಜನ್ರ ಜೀವಕ್ಕೆ ಕಂಟಕವಾಗುತ್ತಿರುವುದು ಮಾತ್ರ ವಿಪರ್ಯಾಸ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಆಸ್ಪತ್ರೆಯಲ್ಲಿ ಸ್ವಚ್ಛತೆ ಪಾಲನೆ ಮಾಡುತ್ತಾರಾ? ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Edited By :
PublicNext

PublicNext

18/01/2026 12:52 pm

Cinque Terre

12.41 K

Cinque Terre

0