ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಮಗಳನ್ನು ಕರೆ ತರಲು ಹೋಗಿ ಮಸಣ ಸೇರಿದ ತಂದೆ

ಬೀದರ್: ಇತ್ತೀಚೆಗೆ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿದ್ದ ಬಂಬಳಗಿ ಗ್ರಾಮದ ಸಂಜೀವ್‌ಕುಮಾರ್ ಅವರ ಕುಟುಂಬಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಮಗಳನ್ನು ಕರೆತರಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಸಂಜೀವ್‌ಕುಮಾರ್ ಈ ದುರಂತಕ್ಕೆ ಬಲಿಯಾಗಿದ್ದರು.

ಪರಿಹಾರದ ಭರವಸೆ

ಕುಟುಂಬ ಸದಸ್ಯರ ನೋವು ಆಲಿಸಿದ ಬಳಿಕ ಮಾತನಾಡಿದ ಖಾಶೆಂಪುರ್, ಮೃತ ಸಂಜೀವ್‌ಕುಮಾರ್ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಇದರ ಜೊತೆಗೆ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರೊಂದಿಗೆ ಮಾತನಾಡಿ, ಇಲಾಖೆಯಿಂದ ಸಾಧ್ಯವಾದಷ್ಟು ನೆರವು ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿಯೂ ಅವರು ತಿಳಿಸಿದರು.

Edited By :
PublicNext

PublicNext

21/01/2026 01:29 pm

Cinque Terre

15.76 K

Cinque Terre

0