ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಧಿ ಪುರಸ್ಕಾರ ಕ್ಕೆ 2 ಗ್ರಾಮ ಪಂಚಾಯತ್ ಮಧ್ಯೆ ಫೈಟ್

ಬೀದರ್: ಬೀದರ್ ತಾಲೂಕಿನ ಮರಖಲ ಹಾಗೂ ಬರೂರ ಗ್ರಾಮ ಪಂಚಾಯತಿಗಳ ಮಧ್ಯೆ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಪೈಪೋಟಿ ನಡೆದಿದೆ. 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬರೂರ ಗ್ರಾಮ ಪಂಚಾಯತಿಯ ಆಯ್ಕೆಯನ್ನ ಮರಖಲ ಗ್ರಾಮಸ್ಥರು ವಿರೋಧಿಸಿದ್ದಾರೆ. ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಅವರು ತಾರತಮ್ಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಮಾನದಂಡಗಳ ಪ್ರಕಾರ ಆಯ್ಕೆ ಮಾಡದೆ ಕಡಿಮೆ ಅಂಕ ಪಡೆದ ಬರೂರ ಗ್ರಾಮ ಪಂಚಾಯತಿಯನ್ನ ಗಾಂಧಿ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ಮರಖಲ ಗ್ರಾಮ ಪಂಚಾಯತಿಯನ್ನ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಕಡೆಗಣಿಸಿದ್ದಾರೆ. ಈ ತಾರತಮ್ಯವನ್ನ ಹತ್ತು ದಿನಗಳ ಸರಿಪಡಿಸಬೇಕು. ಇಲ್ಲದಿದ್ದರೆ ಬೀದರ್- ಔರಾದ್ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಹೋರಾಟ ಮಾಡುತ್ತೇವೆ ಅಂತಾ ಮರಖಲ ಗ್ರಾಮಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Edited By : Vinayak Patil
Kshetra Samachara

Kshetra Samachara

23/01/2026 03:20 pm

Cinque Terre

3.06 K

Cinque Terre

0