ರಾಯಚೂರು : ಜಿಲ್ಲೆಯ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಗೆ ಮರಳು ದಂಧೆಕೋರರು ಬೆದರಿಕೆ ಹಾಕಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗ್ತಿದೆ.
ಇದೀ ಅಕ್ರಮ ಮರಳು ದಂಧೆಕೋರರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ದೇವದುರ್ಗ ಶಾಸಕಿ ಕರೆಮ್ಮ ನಾಯಕ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ, ಶಾಸಕರಿಗೆ ಕರೆ ಮಾಡಿಯೇ ನಾವು ಮನೆ ಬಳಿ ಹೋಗಿದ್ದೆವು. ಆದ್ರೆ ಇದೆಲ್ಲವೂ ರಾಜಕೀಯ ಪ್ರೇರಿತ ಹಾಗೂ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕರೆಮ್ಮ ನಾಯಕ್ ಮಾಡ್ತಿರೋ ನಾಟಕ ಅಂತ ಶ್ರೀನಿವಾಸ್ ನಾಯಕ್ ಆರೋಪಿಸಿದ್ದಾರೆ. ಗುಂಡಾಗರ್ದಿ ಮಾಡ್ತಾರೆ ಎಂದು ಶಾಸಕರು ದೂರಿದ್ದಾರೆ. ಆದ್ರೆ ಯಾರು ಗುಂಡಾ ಗರ್ದಿ ಮಾಡ್ತಿರೋರು.? ಶಾಸಕರೇ ಅಕ್ರಮ ಮರಳುಗಾರಿಕೆಯಲ್ಲಿ ಪಾಲು ಹೊಂದಿದ್ದಾರೆ. ಅಲ್ಲದೇ ತಡೆಯಲು ಹೋದ ಪೊಲೀಸರ ಮೇಲೆಯೇ ಅವರ ಮಗ ಐಬಿಯಲ್ಲಿ ಹಲ್ಲೆ ನಡೆಸಿದ್ದಾರೆ. ಇದೆಲವೂ ಜಗಜ್ಜಾಹೀರಾಗಿದೆ. ತಮ್ಮ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವೂ ಸಹ ಶಾಸಕರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ.
PublicNext
23/01/2026 03:22 pm