ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ; ಲಕ್ಕುಂಡಿಯಂತೆ ಕಲ್ಯಾಣ ಚಾಲುಕ್ಯರ ವಾಣಿಜ್ಯ ಕೇಂದ್ರ ಮುದನೂರಿನಲ್ಲಿ ಉತ್ಖನನ ಮಾಡುವಂತೆ ಒತ್ತಾಯ

ಯಾದಗಿರಿ : ಈಗ ಸದ್ಯ ಸಂಚಲನ ಸೃಷ್ಟಿಸಿರುವ ಗದಗದ ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ಕುರಿತು ಸರ್ಕಾರ ಕಳೆದೊಂದು ವಾರದಿಂದ ಉತ್ಪನನ ನಡೆಸುತ್ತಿದೆ. ಅದರಂತೆ ಅದೆಷ್ಟೋ ಐತಿಹಾಸಿಕ ಪ್ರದೇಶಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಅವನತಿಯ ಅಂಚಿಗೆ ತಲುಪಿವೆ. ಅಂತಹ ಐತಿಹಾಸಿಕ ಪ್ರಾಚೀನ ಇತಿಹಾಸ ಹೊಂದಿದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಾಣಿಜ್ಯ ಕೇಂದ್ರದ ಅಗ್ರಹಾರವಾಗಿದ್ದ ಗ್ರಾಮ ಮುದನೂರ ಗ್ರಾಮ. ಹೌದು ಭೂಮಿಯಲ್ಲಿ ಹುದುಗಿರುವ ನೂರಾರು ದೇವಸ್ಥಾನಗಳು ದೇವಸ್ಥಾನ ಮೇಲೆ 160 ಕುಟುಂಬಗಳ ವಾಸ ಗ್ರಾಮದ ಪಾಯ ತೆಗೆಯುವಾಗ ಪತ್ತೆಯಾದ ವಜ್ರ ಬೆಳ್ಳಿ ಬಂಗಾರ ,ವೈಡೂರ್ಯಗಳು ಹಾಗೂ 18 ಶಿಲಾಲಿಪಿಗಳು 101ಲಿಂಗಗಳ ದೇವಸ್ಥಾನಗಳು, ಸಪ್ತ ತೀರ್ಥ ಬಾವಿಗಳ ಕಲ್ಲಿನಲ್ಲಿ ಕೆತ್ತಿರುವ ರಾಮಾಯಣ ,ಮಹಾಭಾರತ ಭಾಗದ ಸನ್ನಿವೇಶ ಕೆತ್ತನೆಗಳು ವರ್ಷ ಪೂರ್ತಿ ತುಂಬಿರುವ ತೀರ್ಥಬಾವಿಗಳು ಅಂದಿನ ಸಮೃದ್ದಿಯ ಕುರುಹಗಳು ಈ ಬಾವಿಗಳು. ಇದೆಲ್ಲಾ ಇತಿಹಾಸ ಹೊಂದಿದ್ದು ದೇವರ ದಾಸಿಮಯ್ಯ ಅವರ ಜನ್ಮಸ್ಥಳ ಮುದನೂರು (ಬಿ) ಗ್ರಾಮದಲ್ಲಿಯೂ ಉತ್ಪನನ ನಡೆಸುವಂತೆ ಕೂಗು ಕೇಳಿ ಬರುತ್ತಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮ ಈ ಹಿಂದೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡ ಇತಿಹಾಸ ಹೊಂದಿರುವಂತಹ ಮುದನೂರ ಗ್ರಾಮ . ಹಾಗೆಯೇ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಪರಿಚಯಿಸಿದ 11ನೇ ಶತಮಾನದ ಆಧಿವಚನಕಾರ ದೇವರ ದಾಸಿಮಯ್ಯ ಅವರ ಜನ್ಮಭೂಮಿ ಕೂಡಾ ಇದಾಗಿದೆ. ಹೀಗಾಗಿ ಭೂಗರ್ಭದಲ್ಲಿ ಐತಿಹಾಸಿಕ ಕುರುಹುಗಳಿದ್ದು, ಈ ಧಾರ್ಮಿಕ ಕ್ಷೇತ್ರದಲ್ಲಿ ಉತ್ಪನನ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಇಲ್ಲಿನ ಐತಿಹಾಸಿಕ ಸಂಪತ್ತು, ಶಿಲಾ ಶಾಸನಗಳು ಹಾಗೂ ದೇವಸ್ಥಾನಗಳು ಭೂಗರ್ಭದಲ್ಲಿ ಮುಚ್ಚಿ ಹೋಗಿವೆ. ಉತ್ಖನನ ಮಾಡುವ ಮೂಲಕ ಹೊರತೆಗೆಯುವ ಕೆಲಸವಾಗಬೇಕಿದೆ. ಶಿವಲಿಂಗಗಳು ಉತ್ಪನನ ಮಾಡಿದರೆ ಭೂಗರ್ಭದಲ್ಲಿಯೇ ಅಪಾರ ಸಂಪತ್ತು ದೊರೆಯುತ್ತದೆ. ಅದೇ ರೀತಿ ನೂರಾರು ದೇಗುಲಗಳ ಕುರುಹುಗಳು ಪತ್ತೆಯಾಗಲಿವೆ ಇದಕ್ಕೆ ಪ್ರಾಧಿಕಾರ ರಚನೆ ಮಾಡಬೇಕು ಇಲ್ಲಿನ ಅಪಾರ ಸಂಪತ್ತು ಹೊರತೆಗೆಯಬೇಕೆನ್ನುವುದು ಗ್ರಾಮಸ್ಥರ ಮನವಿಯಾಗಿದೆ‌ .

ವಿರೇಶ ರೆಡ್ಡಿ ಯಾಳಗಿ, ಪಬ್ಲಿಕ್ ನೆಕ್ಸ್ಟ್, ಯಾದಗಿರಿ

Edited By : Vinayak Patil
PublicNext

PublicNext

27/01/2026 07:55 am

Cinque Terre

17.34 K

Cinque Terre

0