ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಅತಿ ಎತ್ತರದ ಹನುಮಧ್ವಜವನ್ನು ಇಳಿಸಿ, ಅದೇ ಧ್ವಜಸ್ತಂಭದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ರಾಷ್ಟ್ರಧ್ವಜವನ್ನು ಹಾರಿಸಿದ್ದ ಪ್ರಕರಣಕ್ಕೆ ನಾಳೆ, ಜನವರಿ 28ಕ್ಕೆ ಎರಡು ವರ್ಷ ತುಂಬಲಿದೆ. ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಈ ಘಟನೆಯ ವಾರ್ಷಿಕೋತ್ಸವದಂದು, ಹಿಂದೂ ಪರ ಸಂಘಟನೆಗಳು ಹನುಮಧ್ವಜ ಇಳಿಸಿದ ದಿನವನ್ನು 'ಕರಾಳ ದಿನ'ವನ್ನಾಗಿ ಆಚರಿಸಲು ತೀರ್ಮಾನಿಸಿವೆ.
ಪಂಜಿನ ಮೆರವಣಿಗೆಗೆ ಸಿದ್ಧತೆ
ಜನವರಿ 28ರ ಸಂಜೆ ಕೆರಗೋಡು ಗ್ರಾಮದಲ್ಲಿ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಸ್ವಾಭಿಮಾನಿ ಮಂಡ್ಯದ ಸಾರ್ವಜನಿಕರು ಭಾಗವಹಿಸುವಂತೆ ಹಿಂದೂ ಪರ ಸಂಘಟನೆಗಳು ಮನವಿ ಮಾಡಿವೆ.
ಪ್ರಮೋದ್ ಮುತಾಲಿಕ್ ಭಾಗಿ
ಶ್ರೀರಾಮಸೇನೆ ಸಂಸ್ಥಾಪನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. "ತಾವೂ ಕೆರಗೋಡಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ" ಎಂದು ಮುತಾಲಿಕ್ ಹೇಳಿದ್ದಾರೆ.
PublicNext
27/01/2026 08:55 pm
LOADING...