ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಚಿರತೆ ಭೀತಿಯಲ್ಲಿ ಯಾದಗಿರಿ ಜನ ಸುರಕ್ಷತೆಗೆ ಆಗ್ರಹ!

ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಬಳಿ ಜಮೀನಿನಲ್ಲಿ ಮಧ್ಯರಾತ್ರಿ ಚಿರತೆ ದಾಳಿ ನಡೆದಿದೆ.

ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಚಿರತೆ ಎಳೆದುಕೊಂಡು ಹೋಗಿ ತಿಂದು ಹಾಕಿರುವ ಘಟನೆ ನಡೆದಿದ್ದು,.. ಚಿರತೆ ದಾಳಿಯಿಂದ ಬಳಿಚಕ್ರ ಗ್ರಾಮ ಅಲ್ಲದೆ ಸೈದಾಪುರ ಸೇರಿ ಸುತ್ತಲಿನ ಗ್ರಾಮದ ಜನರಿಗೆ ಆತಂಕ ಮೂಡಿಸಿದೆ.

ಚಿರತೆ ಸೆರೆ ಹಿಡಿಯಲು ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ಕೂಡ ಮಸಕನಹಳ್ಳಿ, ಮುಂಡರಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರಂತರವಾಗಿ ಚಿರತೆ ದಾಳಿ ನಡೆಯುತ್ತಾ ಬಂದಿದ್ದರು ಯಾವುದೇ ಕ್ರಮ ತೆಗೆದುಕೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಚಿರತೆಗಳ ಗವಿ ಪತ್ತೆ ಹಚ್ಚುವಲ್ಲಿ ಸಿಸಿ ಟಿವಿ ಅಳವಡಿಕೆ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಕೂಡಲೇ ಹಸು ಕಳೆದುಕೊಂಡ ರೈತ ಸಿದ್ದಪ್ಪನಿಗೆ ಸೂಕ್ತ ಪರಿಹಾರ ನೀಡಬೇಕು, ಇನ್ನು ಮುಂದಿನ ದಾಳಿಗೂ ಮುಂಚಿತವಾಗಿ ಚಿರತೆ ಸೆರೆ ಹಿಡಿಯದಿದ್ದರೆ ಯಾದಗಿರಿ - ರಾಯಚೂರು ಮುಖ್ಯ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Edited By : Manjunath H D
PublicNext

PublicNext

27/01/2026 10:22 pm

Cinque Terre

19.9 K

Cinque Terre

0