ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಚಾಲಕನ ನಿಯತ್ರಣ ತಪ್ಪಿ ಓವರ್ ಲೋಡ್ ಟಿಪ್ಪರ್ ಮರಕ್ಕೆ ಡಿಕ್ಕಿ

ಗದಗ: ಎಂ ಸ್ಯಾಂಡ್ ಹೇರಿಕೊಂಡು ಬರ್ತಿದ್ದ ಓವರ್ ಲೋಡ್ ಟಿಪ್ಪರ್ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಜರುಗಿದೆ. ಗದಗ ಮುಳಗುಂದ ಮಾರ್ಗ ಮಧ್ಯೆ ಓವರ್ ಲೋಡ್ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ. ಆದ್ರೆ ಭಾರೀ ಅನಾಹುತ ತಪ್ಪಿದ್ದು ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದಾನೆ.

ದಿನನಿತ್ಯವೂ ನೂರಾರು ಟಿಪ್ಪರ್ ಗಳು ಓವರ್ ಲೋಡ್ ಹೇರಿಕೊಂಡು ಹೋಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಮಾತಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Shivu K
PublicNext

PublicNext

29/01/2026 07:03 pm

Cinque Terre

11.37 K

Cinque Terre

0