ಯಾದಗಿರಿ: ಆಟೋ ಚಾಲಕರೊಬ್ಬರು ತಮ್ಮ ವಾಹನದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಪ್ರಾಮಾಣಿಕವಾಗಿ ಮರಳಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಯಾದಗಿರಿ ನಗರದ ಸೆಂಚುರಿಯನ್ ಶಾಲೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುವ ಸಾಬಣ್ಣ ಎಂಬುವವರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ಹಣ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಆಟೋ ಚಾಲಕರು ತಕ್ಷಣವೇ ಪೊಲೀಸರ ಸಹಾಯ ಪಡೆದು, ಸಾಬಣ್ಣ ಅವರನ್ನು ಪತ್ತೆ ಹಚ್ಚಿ, ಅವರಿಗೆ ಸೇರಿದ ಸಂಪೂರ್ಣ ಹಣವನ್ನು ಮರಳಿಸಿದ್ದಾರೆ. ಚಾಲಕನ ಈ ಪ್ರಾಮಾಣಿಕತೆ ಮತ್ತು ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
PublicNext
30/01/2026 07:56 am
LOADING...