ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಸಹಸ್ರಾರು ಭಕ್ತರ ಭಕ್ತಿ ಸಾಗರದಲ್ಲಿ ಗಬ್ಬೂರು ಜಾತ್ರಾ ಮಹೋತ್ಸವ ಸಂಪನ್ನ!

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಗಬ್ಬೂರು ಶ್ರೀ ಬೂದಿ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಸಹಸ್ರಾರು ಭಕ್ತರ ಭಕ್ತಿಪೂರ್ವಕ ಘೋಷಣೆಗಳ ನಡುವೆ, ರಥವು ತನ್ನ ಮೂಲ ಸ್ಥಾನಕ್ಕೆ ಮರಳಿತು.

ಮಠದ ಪೀಠಾಧಿಪತಿ ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಬೂದಿ ಬಸವೇಶ್ವರ ಮಠದ ಮಹಾರಥೋತ್ಸವ ಅತ್ಯಂತ ವೈಭವದಿಂದ ಜರುಗಿತು. ಸಾಮಾನ್ಯವಾಗಿ ರಥಗಳನ್ನು ಏಣಿ ಅಥವಾ ಹಗ್ಗಗಳ ಸಹಾಯದಿಂದ ಎಳೆಯುವುದನ್ನು ನಾವು ನೋಡುತ್ತೇವೆ. ಆದರೆ, ಗಬ್ಬೂರು ಬೂದಿ ಬಸವೇಶ್ವರ ರಥೋತ್ಸವದ ವೈಶಿಷ್ಟ್ಯವೇ ವಿಭಿನ್ನ. ಇಲ್ಲಿನ ಬೃಹತ್ ರಥವು ಪೀಠಾಧಿಪತಿ ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಕೈ ಸನ್ನೆ ಮಾಡಿದರೆ ಮಾತ್ರ ತೇರಿನ ಮನೆಯೊಳಗೆ ಸಾಗುತ್ತದೆ ಎಂಬ ಪ್ರತೀತಿ ಇದೆ.

Edited By :
PublicNext

PublicNext

30/01/2026 10:07 pm

Cinque Terre

7.78 K

Cinque Terre

0