ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ವಿಧವೆಯರಿಗೆ ಹೊಸ ಬದುಕು - ರೋಟರಿ ಟಾಯ್ಸ್ ಸಿಟಿಯಿಂದ ಸೀಮೆ ಹಸುಗಳ ಕೊಡುಗೆ!

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ರೋಟರಿ ಟಾಯ್ಸ್ ಸಿಟಿ ವತಿಯಿಂದ ವಿಧವೆಯರಿಗೆ ಉಚಿತವಾಗಿ ಸೀಮೆಹಸುಗಳನ್ನು ವಿತರಿಸುವ ಮೂಲಕ ಮಾನವೀಯ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಜಿಲ್ಲೆಯ ವಿಧವೆಯರ ಸಬಲೀಕರಣಕ್ಕೆ ನೆರವಾಗುವ ಉದ್ದೇಶದಿಂದ ರೋಟರಿ ಟಾಯ್ಸ್ ಸಿಟಿ ವತಿಯಿಂದ ಪ್ರತಿವರ್ಷವೂ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಗೆ ಒಟ್ಟು 54 ಹಸುಗಳನ್ನು ವಿತರಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ, ಇಂದು ಚನ್ನಪಟ್ಟಣದಲ್ಲಿ ಫಲಾನುಭವಿಗಳಿಗೆ ಹಸುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚನ್ನಪಟ್ಟಣ ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ಅವರು, ಈ ಸಮಾಜಮುಖಿ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Edited By : Vinayak Patil
Kshetra Samachara

Kshetra Samachara

31/01/2026 09:52 am

Cinque Terre

900

Cinque Terre

0