ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರ ವಿವಾದ...! ಅರ್ಧಕ್ಕೆ ಸ್ಥಗಿತಗೊಂಡ ಗ್ರಾಮ ದೇವತೆ ಜಾತ್ರೆ...!

ನಂಜನಗೂಡು : ಗ್ರಾಮದ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಬಾವುಟ ಅಳವಡಿಸಿದ ಹಿನ್ನಲೆ ಉಂಟಾದ ವಿವಾದ ಜಾತ್ರೆ ಸಂಭ್ರಮವನ್ನ ಮೊಟಕುಗೊಳಿಸಿದ ಘಟನೆ ನಂಜನಗೂಡು ತಾಲೂಕು ಹಗಿನವಾಳು ಗ್ರಾಮದಲ್ಲಿ ನಡೆದಿದೆ. ಬಾವುಟ ತೆಗೆಯುವ ವಿಚಾರದಲ್ಲಿ ಎರಡು ಸಮುದಾಯದ ನಡುವೆ ಉಂಟಾದ ಮಾತಿನ ಚಕಮಕಿ ಜಾತ್ರೆ ಸ್ಥಗಿತವಾಗುವಂತೆ ಮಾಡಿದೆ. ವಿದ್ಯುಕ್ತ ಚಾಲನೆ ದೊರೆತು ಅದ್ಧೂರಿಯಿಂದ ಆರಂಭವಾದ ರಥೋತ್ಸವ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ.ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನಂಜನಗೂಡು ತಾಲೂಕು ಹಗಿನವಾಳು ಗ್ರಾಮದ ಪಟ್ಟದ ಅಮ್ಮ ರಾಣಿ ದೇವತೆಯ ಜಾತ್ರಾ ಮಹೋತ್ಸವಕ್ಕೆ ಇಂದು ಚಾಲನೆ ದೊರೆಯಿತು.ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು.ದೇವಾಲಯದ ಸಮೀಪವಿರುವ ವೃತ್ತದ ಬಳಿ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಭಾವಚಿತ್ರವಿರುವ ಬಾವುಟ ಅಳವಡಿಸಲಾಗಿತ್ತು.ಜಾತ್ರೆ ತೇರು ಇದೇ ವೃತ್ತದಿಂದ ಸಾಗಬೇಕಿತ್ತು. ಒಂದು ಸಮುದಾಯ ಬಾವುಟವನ್ನ ತೆರವುಗೊಳಿಸುವಂತೆ ಪಟ್ಟು ಹಿಡಿಯಿತು.ಮತ್ತೊಂದು ಸಮುದಾಯ ಬಾವುಟ ತೆರವುಗೊಳಿಸಲು ವಿರೋಧಿಸಿತು.ಈ ವೇಳೆ ಬಾವುಟದ ಬಳಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾತಿನ ಚಕಮಕಿಗೆ ಇಳಿಯಿತು.ಅದ್ದೂರಿಯಿಂದ ಆರಂಭವಾದ ಜಾತ್ರೆಯ ರಥ ಅರ್ಧಕ್ಕೆ ಸ್ಥಗಿತವಾಯಿತು. ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿತು. ಇದೇ ವೇಳೆ ದೇವಾಲಯಕ್ಕೆ ಬೀಗ ಜಡಿದ ಒಂದು ಸಮುದಾಯ ಪೂಜಾ ಕೈಂಕರ್ಯಗಳಿಗೂ ಬ್ರೇಕ್ ಹಾಕಿತು.ಎರಡು ಸಮುದಾಯಗಳು ಯಾವುದೇ ತೀರ್ಮಾನಕ್ಕೆ ಬರದೆ ಪಟ್ಟು ಹಿಡಿದು ಕುಳಿತ ಕಾರಣ ಇದೀಗ ರಥ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ.ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಎರಡು ಸಮುದಾಯದ ಮುಖಂಡರ ಮನ ಒಲಿಕೆಗೆ ಯತ್ನಿಸಿದರಾದರೂ ಪಟ್ಟು ಸಡಿಲಿಸಲಿಲ್ಲ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಜಾತ್ರೆಯ ಸಂಭ್ರಮಕ್ಕೆ ಮಂಕು ಕವಿದಂತಾಗಿದೆ.ವ್ಯಾಪಾರಿಗಳು ಹೈರಾಣಾಗಿದ್ದಾರೆ.ಹೊರಗಿನಿಂದ ಬಂದ ಭಕ್ತರು ಬೇಸತ್ತಿದ್ದಾರೆ.

Edited By : Shivu K
PublicNext

PublicNext

02/02/2026 01:20 pm

Cinque Terre

15.48 K

Cinque Terre

0

ಸಂಬಂಧಿತ ಸುದ್ದಿ