ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಹಿಳಾ ವಿಚಾರ ಗೋಷ್ಠಿ

ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮೈಸೂರು ಜಿಲ್ಲೆಯ ಕುವೆಂಪು ನಗರದ ಚಿಕ್ಕಮನಿಕೇತನ ಸಭಾಂಗಣದಲ್ಲಿ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ರವಿವಾರ ನೆರವೇರಿತು.ಹಿರಿಯ ನ್ಯಾಯವಾದಿ ಶಿವಸ್ವಾಮಿ, ವೈದ್ಯೆ ಸಹನಾ, ನ್ಯಾಯವಾದಿ ಬಾಲಕೃಷ್ಣ, ಯೂಟ್ಯೂಬರ್ ವಿಕಾಸ ಶಾಸ್ತ್ರೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನ್ಯಾಯವಾದಿಗಳು ಮಹಿಳೆಯರ ಹಕ್ಕು ಮತ್ತು ಕಾನೂನು ಬಗ್ಗೆ ಮಾಹಿತಿ ನೀಡಿದರು. ಯೂಟ್ಯೂಬರ್ ವಿಕಾಸ ಶಾಸ್ತ್ರೀ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಮೋಸಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂಬುದನ್ನು ತಿಳಿಸಲಾಯಿತು.ಕೇಂದ್ರದ ಸದಸ್ಯರಿಗೆ ಹೂಗುಚ್ಚ ಮಾಡುವ ಸ್ಪರ್ಧೆ, ತಟ್ಟೆಯಲ್ಲಿ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮೈಸೂರು ಜಿಲ್ಲಾ ಹಿರಿಯ ನಿರ್ದೇಶಕ ವಿಜಯ್ ಕುಮಾರ್ ನಾಗನಳ್, ಕುವೆಂಪು ನಗರ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

02/02/2026 08:42 pm

Cinque Terre

480

Cinque Terre

0