ಮೈಸೂರು: ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಗರದ ಸಂಕಲ್ಪ ಸೌಧ ಸಮುಚ್ಚಯ ಕಳಸ್ತವಾಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ನೆರವೇರಿತು.
ಮೈಸೂರು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಂರಕ್ಷಣಾ ಅಧಿಕಾರಿ ಸಂಗೀತಾ ಪೂಜಾರಿ, ಸಾಮಾಜಿಕ ಕಾರ್ಯಕರ್ತ ವಿಕಾಸ್ ಶಾಸ್ತ್ರಿ ಮೈಸೂರು, ಸ್ತ್ರೀರೋಗ ತಜ್ಞೆ ಡಾ||ಭಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ವೇಳೆ ಮಾತನಾಡಿದ ಅವರು, ಅವಕಾಶ ವಂಚಿತರಾದವರು ಮತ್ತು ಆದರ್ಶ ಮಹಿಳೆಯರನ್ನು ಗಮನಿಸಿ ಇಂದಿನ ಮಹಿಳೆಯರು ಕ್ರಿಯಾಶೀಲಳಾಗಬೇಕು. ನಾಲ್ಕು ಗೋಡೆಗಳ ಮಧ್ಯ ಇದ್ದ ಮಹಿಳೆ ತನ್ನ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಕುಟುಂಬಕ್ಕೆ ಕಣ್ಣಾಗಿದ್ದ ಮಹಿಳೆ ಇವತ್ತು ಸಮಾಜದ ಕಣ್ಣಾಗಿದ್ದಾಳೆ. ಮಹಿಳೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಗುರುತಿಸಿಕೊಂಡು ತನ್ನ ಸ್ವಾವಲಂಬನೆಯಿಂದ ಜೀವನ ನಡೆಸುವಲ್ಲಿ ಯಶಸ್ಸು ಕಂಡುಕೊಂಡಿರುವುದರಿಂದ ಹೆಣ್ಣು ಇವತ್ತು ಶೋಷಣೆಯಿಂದ ಹೊರಬರಲು ಸಾಧ್ಯವಾಗಿದೆ. ಹೆಣ್ಣು ಅಬಲೆಯಲ್ಲ ಸಬಲೆ, ಗಂಡು ಮಕ್ಕಳಿಗೆ ಸಮಾನರಾಗಿ ಹೆಣ್ಣು ಇರಬೇಕು, ಒಬ್ಬ ಮಹಿಳೆ ಮನಸ್ಸು ಮಾಡಿದರೆ ಒಂದು ಊರು, ಒಂದು ಗ್ರಾಮ, ಅಷ್ಟೇ ಅಲ್ಲ ಒಂದು ದೇಶವನ್ನೇ ಅಭಿವೃದ್ಧಿ ಮಾಡುತ್ತಾಳೆ ಎಂದು ನುಡಿದರು.
ಪ್ರಾದೇಶಿಕ ನಿರ್ದೇಶಕರು ಬಿ.ಜಯಂತ ಪೂಜಾರಿ, ಜಿಲ್ಲಾ ನಿರ್ದೇಶಕರು ವಿ. ವಿಜಯ್ ಕುಮಾರ್ ನಾಗನಾಳ, ಕ್ಷೇತ್ರ ಯೋಜನಾಧಿಕಾರಿ ಶಶಿರೇಖಾ ಪಿ. , ಯೋಜನಾಧಿಕಾರಿ ಪ್ರಾ.ಕ ಮೈಸೂರು ಮೂಕಾಂಬಿಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿಯಾದ ಮಂಜುಳಾ, ಎಲ್ಲಾ ಮೇಲ್ವಿಚಾರಕರ ಶ್ರೇಣಿಯ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
02/02/2026 10:13 pm
LOADING...