ಹಾಸನ: ತನ್ನನ್ನು ರಾಜಕೀಯವಾಗಿ ಮುಗಿಸಲು ದೆಹಲಿ ಮಟ್ಟದಲ್ಲಿ ನಡೆದ ಪಿತೂರಿಗಳ ಬಗ್ಗೆ ತನಗೆ ಸಂಪೂರ್ಣ ಅರಿವಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸದನದಲ್ಲಿ ಗುಡುಗಿದ್ದಾರೆ. "ನನ್ನ ಅಧ್ಯಾಯ ಮುಗಿಯಿತು ಎಂದು ಯಾರೂ ಭಾವಿಸಬೇಡಿ, 2028ರ ಚುನಾವಣೆಯಲ್ಲಿ ರೇವಣ್ಣ ಏನೆಂದು ತೋರಿಸಿಕೊಡುತ್ತೇನೆ" ಎಂದು ಸವಾಲು ಹಾಕಿದರು. ಕಳೆದ ಎರಡು ವರ್ಷಗಳಿಂದ ತನ್ನ ವಿರುದ್ಧ ದೆಹಲಿಯಲ್ಲಿ ಏನೆಲ್ಲಾ ನಡೆದಿದೆ ಎಂಬ ಎಳೆಎಳೆಯಾದ ಮಾಹಿತಿ ನನ್ನಲ್ಲಿದೆ. ಸರಿಯಾದ ಸಮಯ ಬಂದಾಗ ಜನರ ಮುಂದೆ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದರು.
PublicNext
23/03/2026 07:39 pm
LOADING...