ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026ರ ಅತ್ಯಂತ ವೇಗದ ಎಸೆತ ಎಸೆದ ಅಶೋಕ್ ಶರ್ಮಾ

ಅಹಮದಾಬಾದ್‌: ಗುಜರಾತ್ ಟೈಟಾನ್ಸ್ ತಂಡದ ಯುವ ವೇಗದ ಬೌಲರ್ ಅಶೋಕ್ ಶರ್ಮಾ ಐಪಿಎಲ್ 2026ರಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 16ನೇ ಓವರ್‌ನಲ್ಲಿ ಅಶೋಕ್ 154.2 ಕಿ.ಮೀ ವೇಗದಲ್ಲಿ ಚೆಂಡೆಸೆದು, ಈ ಋತುವಿನ ಇದುವರೆಗಿನ ಅತ್ಯಂತ ವೇಗದ ಎಸೆತ ದಾಖಲಿಸಿದ್ದಾರೆ. ಈ ಮೂಲಕ ಅವರು ಐಪಿಎಲ್ 2026ರಲ್ಲಿ 150 ಕಿ.ಮೀ ವೇಗವನ್ನು ದಾಟಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. 23 ವರ್ಷದ ಈ ವೇಗಿ ತಮ್ಮ ಸ್ಫೋಟಕ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬೌಲರ್‌ಗಳ ವೇಗದ ಎಸೆತ

1. 157.0 ಕಿಮೀ / ಗಂಟೆ - ಉಮ್ರಾನ್ ಮಲಿಕ್

2. 156.70 ಕಿಮೀ / ಗಂಟೆ - ಮಯಾಂಕ್ ಯಾದವ್

3. 156.0 ಕಿಮೀ / ಗಂಟೆ - ಉಮ್ರಾನ್ ಮಲಿಕ್

4. 155.80 ಕಿಮೀ / ಗಂಟೆ - ಮಯಾಂಕ್ ಯಾದವ್

5. 154.2 ಕಿಮೀ / ಗಂಟೆ - ಅಶೋಕ್ ಶರ್ಮಾ

Edited By : Vijay Kumar
PublicNext

PublicNext

05/04/2026 09:12 am

Cinque Terre

52.37 K

Cinque Terre

0