ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಷ್ಕರ್ ಭಯೋತ್ಪಾದಕರಿಗಿಂತ ಹಿಂದೂಗಳೇ ಅಪಾಯಕಾರಿ ಎಂದಿದ್ರು ರಾಹುಲ್..! – ಮೋದಿ ಗುಡುಗು

ನವದೆಹಲಿ: ದೇಶವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವಾಗ ಕಾಂಗ್ರೆಸ್ ಪಕ್ಷವು "ಹಿಂದೂ ಭಯೋತ್ಪಾದನೆ" ಎಂಬ ಸಿದ್ಧಾಂತವನ್ನು ಜಗತ್ತಿಗೆ ಹಬ್ಬಿಸುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿಷಯದಲ್ಲಿ ಕಾಂಗ್ರೆಸ್‌ನ ಹಳೆಯ ನಿಲುವುಗಳನ್ನು ನೆನಪಿಸಿದರು.

ಭಾರತವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದಾಗ ಕಾಂಗ್ರೆಸ್ ಏನು ಮಾಡುತ್ತಿತ್ತು? ಅವರು ಜಗತ್ತಿಗೆ ಹಿಂದೂ ಭಯೋತ್ಪಾದನೆಯ ಸಿದ್ಧಾಂತವನ್ನು ಹೇಳುತ್ತಿದ್ದರು. ಅವರ ನಾಯಕ (ರಾಹುಲ್ ಗಾಂಧಿ) ಭಾರತದಲ್ಲಿನ ಹಿಂದೂ ಸಂಘಟನೆಗಳು ಲಷ್ಕರ್-ಎ-ತೈಬಾ (LeT) ಭಯೋತ್ಪಾದಕರಿಗಿಂತ ದೊಡ್ಡ ಭೀತಿ ಎಂದು ಜಗತ್ತಿಗೆ ಸಾರುತ್ತಿದ್ದರು. ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಹಿಂದೂ ಸಮಾಜಕ್ಕೆ ಭಯೋತ್ಪಾದನೆಯ ಹಣೆಪಟ್ಟಿ ಹಚ್ಚಲು ಪ್ರಯತ್ನಿಸಿತ್ತು ಎಂದು ಪ್ರಧಾನಿ ಕಿಡಿಕಾರಿದರು.

ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ಯಾವಾಗಲೂ ಮೃದು ಧೋರಣೆ ಅನುಸರಿಸುತ್ತಾ ಬಂದಿದೆ ಮತ್ತು ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯನ್ನು ಕಡೆಗಣಿಸಿದೆ ಎಂದು ಪ್ರಧಾನಿ ದೂರಿದರು.

Edited By :
PublicNext

PublicNext

24/03/2026 10:37 pm

Cinque Terre

32.09 K

Cinque Terre

3

ಸಂಬಂಧಿತ ಸುದ್ದಿ