ಉಡುಪಿ: ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಾವು ಒಬ್ಬ ಹಿಂದುಳಿದ ವರ್ಗದ ಯುವಕನಿಗೆ ಟಿಕೆಟ್ ಕೊಟ್ಟಿದ್ದೇವೆ. ಬಾಗಲಕೋಟೆಯಲ್ಲಿ ಈ ಹಿಂದೆ ಸೋತವರಿಗೆ ಕೊಟ್ಟಿದ್ದೇವೆ.
ಎರಡೂ ಕಡೆ ನಮ್ಮ ಶಾಸಕರು ಇಲ್ಲ. ಆದರೆ, ಸರಕಾರದ ಜನವಿರೋಧಿ ಧೋರಣೆಗಳಿಂದ ಜನರು ಬೇಸತ್ತಿದ್ದಾರೆ ಎಂಬುದು ಎರಡೂ ಕ್ಷೇತ್ರಗಳಿಗೆ ನಾವು ಹೋಗಿ ನೋಡಿದಾಗ ಗೊತ್ತಾಯಿತು. ಆದ್ದರಿಂದ ಈ ಸಲ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
PublicNext
30/03/2026 04:50 pm
LOADING...