ಬ್ರಹ್ಮಾವರ: 21 ವರ್ಷದಿಂದ ಬ್ರಹ್ಮಾವರದಲ್ಲಿ ಕ್ರೀಡಾ ಚಟುವಟಿಕೆಯಿಂದ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳನ್ನು ತರಬೇತುಗೊಳಿಸಿ ಕ್ರೀಡಾ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಹೆರಂಜೆಯಲ್ಲಿರುವ ಸ್ವಂತ ನಿವೇಶನ ಇರುವ ಸಂಸ್ಥೆಯ ರೂವಾರಿ ಎಂ ಚಂದ್ರಶೇಖರ ಹೆಗ್ಡೆ ಇವರ ಹೆಸರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ಲಬ್ ಹೌಸ್‌ನ್ನು ಭಾನುವಾರ ಸಂಜೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಿದರು.
ಅವರು ಬಳಿಕ ಮಾತನಾಡಿ ಕರಾವಳಿ ಜಿಲ್ಲೆ ಮೊದಲಿನಿಂದಲೂ ಸರಕಾರದ ಸಹಾಯ ಪಡೆಯುವುದಕ್ಕಿಂತ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದಲೇ ಗುರುತಿಸಿಕೊಂಡಿದ್ದು ಇಂದು ಬ್ರಹ್ಮಾವರದಲ್ಲಿ ಖಾಸಗಿಯಾಗಿ ಸಾರ್ವಜನಿಕರ ಸಹಕಾರದಲ್ಲಿ ನಗರ ಭಾಗದಲ್ಲಿ ಇರುವ ಕ್ರೀಡಾ ಚಟುವಟಿಕೆಯನ್ನು ಗ್ರಾಮೀಣ ಭಾಗದಲ್ಲಿ ಮಾಡಿರುವುದು ಶ್ಲಾಘನೀಯ ಎಂದರು.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ ರಘುಪತಿ ಭಟ್, ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ ಕುಂದರ್,ಸಂಸ್ಥೆಯ ಗೌರವಾಧ್ಯಕ್ಷ ಎಂ ಚಂದ್ರಶೇಖರ ಹೆಗ್ಡೆ, ಅಧ್ಯಕ್ಷ ಬಿಜು ನಾಯರ್, ಮತ್ತು ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತ ಗಣ್ಯರು ಕ್ಲಬ್ ನಲ್ಲಿರುವ ನಾನಾ ಸೌಲಭ್ಯಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನಿರ್ಮಾಣಕ್ಕೆ ನೆರವು ನೀಡಿದವರನ್ನು ಸನ್ಮಾನಿಸಲಾಯಿತು.
PublicNext
30/03/2026 08:08 pm
LOADING...