ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ಡೇಟ್ ಮುಂದೂಡಿದ್ದು ಯಾಕೆ ರಾಧಾ- ರಣವ್…!

ಬೆಂಗಳೂರು: ನಮ್ ಪಾಪ್ ಕಾರ್ನ್ ಸಿನಿಮಾ ಬ್ಯಾನರ್ ಅಡಿಯಲ್ಲಿ, ನಿರ್ದೇಶಕ ಆರ್ಯನ್ ತೇಜಸ್ ಅವರ ಹೊಸ ಪ್ರಯೋಗಾತ್ಮಕ ಚಿತ್ರ “ನಾನು ಕರುಣಾಕರ” ಇದೀಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಆರ್ಯನ್ ತೇಜಸ್ ಸ್ವತಃ ನಾಯಕನಾಗಿ ಅಭಿನಯಿಸಿದ್ದು, “ಭಾರ್ಗವಿ LLB” ಖ್ಯಾತಿಯ ರಾಧ ಭಗವತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೈಜತೆಗೆ ಹತ್ತಿರವಾದ ಕಥಾವಸ್ತು, ಮನಮುಟ್ಟುವ ಭಾವನಾತ್ಮಕ ಕ್ಷಣಗಳು ಹಾಗೂ ವಿಭಿನ್ನ ನಿರೂಪಣಾ ಶೈಲಿ ಪ್ರೇಕ್ಷಕರ ಮನಸೆಳೆದಿದೆ. ವಿಶೇಷವಾಗಿ ನಾಯಕನ ಅಭಿನಯ ಮತ್ತು ರಾಧ ಭಗವತಿ ಅವರ ಪಾತ್ರದ ಗಾಢತೆ ಸಿನಿರಸಿಕರನ್ನು ಆಳವಾಗಿ ಸ್ಪರ್ಶಿಸಿದೆ. ಹಾಗೆಯೇ ಅಮೃತ ಧಾರೆ ರಿಯಲ್ ಕಪಲ್ಸ್ ಅವರ ವೆಜ್ ನಾನ್ ವೆಜ್ ಸ್ಟೋರಿ ಗೆ ತೆರೆ ಎಳೆದಿದ್ದಾರೆ. ನನ್ನ ಮುದ್ದಿನ ಮಡದಿನ ಹೇಗೆ ನೋಡಿದ್ರೂ ಇಷ್ಟ ಆಗುತ್ತೆ. ಅಂತೆ ಏನು ಹೇಳಿದ್ರು ಬನ್ನಿ ಕೇಳೋಣ…

Edited By : Somashekar
PublicNext

PublicNext

03/04/2026 04:55 pm

Cinque Terre

8.53 K

Cinque Terre

0