ಶಿಡ್ಲಘಟ್ಟ : ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರ ವಿರುದ್ಧವಲ್ಲ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಸ್ಪಷ್ಟಪಡಿಸಿದರು.
ನಗರದ ಕರಗದಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇದನ್ನು ನಾಟಕೀಯ ಬೆಳವಣಿಗೆಯಾಗಿ ಮುಂದಿಟ್ಟಿದೆ. ಯಾವುದೇ ಸಮಗ್ರ ಚರ್ಚೆ ಇಲ್ಲದೆ ಕ್ಷೇತ್ರ ಪುನರ್‌ವಿಂಗಡಣೆ ಜೊತೆಗೆ ಮಹಿಳಾ ಮೀಸಲು ಬಿಲ್ ಪಾಸ್ ಮಾಡಲು ಮುಂದಾಗಿರುವುದು ರಾಜಕೀಯ ಉದ್ದೇಶ ಹೊಂದಿದೆ.
ತಮ್ಮ ಅಧಿಕಾರವನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಚಾಣಾಕ್ಯನಿಗಿಂತ ನಾನು ಚತುರ ಎಂದು ಅಮಿತ್ ಶಾ ಒಂದು ಹೆಜ್ಜೆ ಮುಂದೆ ಇದ್ದರೂ, ಈ ಬಿಲ್ಲಿಗೆ ದಿಲ್ಲಿಯಲ್ಲಿ ಬಹುಮತ ಸಿಗುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಇಲ್ಲಿ ನಮಗೆ ಬಹುಮತ ಸಿಗುವುದಿಲ್ಲ, ನಾವು ಸೋಲುವುದು ಗ್ಯಾರಂಟಿ ಆದರೂ ನಮ್ಮ ಸೋಲು ಐದು ರಾಜ್ಯಗಳ ಚುನಾವಣೆಯಲ್ಲಿ ಮತ ಪಡೆಯುವ ಲಾಭ ಇದು. ಮಹಿಳಾ ಮೀಸಲಾತಿ ಅನ್ನುವುದು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಈ ರೀತಿಯಾಗಿ ತರಾತುರಿಯಲ್ಲಿ ಬಿಲ್ ಪಾಸ್ ಮಾಡಲು ಮುಂದಾಗಿರುವುದು. ಮಹಿಳೆಯರ ಶಕ್ತಿ ಮತ್ತು ಅವರ ಸಬಲೀಕರಣಕ್ಕೆ ಮಾಡಿರುವುದಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆರೋಪಿಸಿದರು.
-ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
Kshetra Samachara
19/04/2026 09:29 pm
LOADING...