ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಮಿಗಳ ಫೇವರೇಟ್ ಲಿಸ್ಟ್‌ಗೆ ಮತ್ತೊಂದು ಸಾಂಗ್..!

ಸ್ಯಾಂಡಲ್‌ವುಡ್‌ನಲ್ಲಿ ಈಗ ಪ್ರೇಮದ ಸುರಿಮಳೆ ಶುರುವಾಗಿದೆ . ಹೌದು, ಬಹುನಿರೀಕ್ಷಿತ ಲವ್ ಸೀಸನ್ಸ್ ಚಿತ್ರದ ಮೊದಲ ಲಿರಿಕಲ್ ಸಾಂಗ್ ಮಳೆಯಾಗೋ ಮೊದಲೇ ಈಗ ಎನ್.ಆರ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಧೂಳೆಬ್ಬಿಸ್ತಿದೆ.

ಮಳೆಯಾಗೋ ಮೊದಲೇ ಕೊಡೆ ಹಿಡಿದು ಬರುವೆ...ಎಂತಹ ಅದ್ಭುತ ಸಾಲುಗಳು ಅಲ್ವಾ? 'ಕಾಂತಾರ' ಖ್ಯಾತಿಯ ಪ್ರಮೋದ್ ಮರವಂತೆ ಅವರ ಈ ಸಾಹಿತ್ಯಕ್ಕೆ, ಬಾಲಿವುಡ್ ಸ್ಟಾರ್ ಅರ್ಮಾನ್ ಮಲಿಕ್ ಮತ್ತು ಸರೆಗಮಪ ಪ್ರತಿಭೆ ಪ್ರಜ್ಞಾ ಮರಾಠೆ ಧ್ವನಿಯಾಗಿದ್ದಾರೆ. ವೀರ್ ಸಮರ್ಥ್ ಅವರ ಮ್ಯೂಸಿಕ್ ಅಂತೂ ಮ್ಯಾಜಿಕಲ್ ಆಗಿದೆ.

ಕೃತ್ವಿಕ್ ನಿರ್ದೇಶನದ ಈ ಸಿನಿಮಾದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ಮಿಂಚಿದ್ದು, ಅವರಿಗೆ ಜೋಡಿಯಾಗಿ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ, ಮಂಡ್ಯ ರಮೇಶ್ ಅವರಂತಹ ದಿಗ್ಗಜ ಕಲಾವಿದರ ಸಾಥ್ ಕೂಡ ಈ ಚಿತ್ರಕ್ಕಿದೆ. ನಿರ್ಮಾಪಕ ಎನ್.ಆರ್ ಮಂಜುನಾಥ್ ಅವರ ಈ ಅದ್ಧೂರಿ ಪ್ರಯತ್ನಕ್ಕೆ ಈಗ ಮ್ಯೂಸಿಕ್ ಮೂಲಕ ಭರ್ಜರಿ ಓಪನಿಂಗ್ ಸಿಕ್ಕಿದೆ. ನೀವಿನ್ನೂ ಈ ಮೆಲೋಡಿ ಸಾಂಗ್ ಕೇಳಿಲ್ಲ ಅಂದ್ರೆ ಈಗಲೇ ಕೇಳಿ.

Edited By : Manjunath H D
PublicNext

PublicNext

05/05/2026 07:16 pm

Cinque Terre

60.17 K

Cinque Terre

2