ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ : ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಬೆಳೆಗಳು ನಷ್ಟ

ಶಿಡ್ಲಘಟ್ಟ :ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಅಬ್ಬರಕ್ಕೆ ತಾಲ್ಲೂಕಿನ ಕೊತ್ತನೂರು ಹಾಗೂ ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಅವಾಂತರ ಸೃಷ್ಟಿಸಿತು ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೊಂಚ ಸಮಾಧಾನಗೊಂಡರೆ ಹಲವರಿಗೆ ಮಳೆ ಭಾರೀ ನಷ್ಟ ತಂದಿದೆ.

ಬಿರುಗಾಳಿ ಸಹಿತ ಮಿಂಚು ಗುಡುಗಿನ ರಭಸದೊಂದಿಗೆ ಆರಂಭವಾದ ಆಲಿಕಲ್ಲು ಮಳೆ ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಗುಡುಗಿನ ರಭಸದೊಂದಿಗೆ ಆರಂಭವಾದ ಮಳೆಯಿಂದ ಮಾವು, ದ್ರಾಕ್ಷಿ ತೋಟಗಳಿಗೆ ಭಾರೀ ಹಾನಿಯುಂಟಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ಕೆ.ಮತ್ತುಕದಹಳ್ಳಿ, ಕನ್ನಮಂಗಲ, ಚಿಂತಡಿಪಿ ಗೊರಮಡಗು,ಹಲಸೂರುದಿನ್ನೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರವಾದ ಬೆಳೆ ನಾಶವಾಗಿದೆ. ತಾಲ್ಲೂಕಿನಾದ್ಯಂತ ಹಲವು ಕಡೆ ಮಳೆ ಅಬ್ಬರದಿಂದ ಕೆಲ ರೈತರಿಗೆ ಸಂತಸ ಮೂಡಿಸಿದರೆ ಮತ್ತಷ್ಟು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಸಂಕಷ್ಟಕ್ಕೀಡಾದ ರೈತರ ತೋಟಗಾರಿಕೆ ಬೆಳೆಗಳು ನೆಲಕಚ್ಚಿ ರೈತರ ಆತಂಕಗೊಂಡಿದ್ದಾರೆ. ಈ ಮಳೆಯಿಂದ ಬೆಳೆಗಳು ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು ಸರ್ಕಾರದಿಂದ ಪರಿಹಾರಕ್ಕೆ ರೈತರ ಆಗ್ರಹ ಮಾಡಿದ್ದಾರೆ.

ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By : Shivu K
PublicNext

PublicNext

01/05/2026 03:55 pm

Cinque Terre

20.53 K

Cinque Terre

0