ಚಿಂತಾಮಣಿ : ಕೆರೆಯಲ್ಲಿ ಮಕ್ಕಳನ್ನು ರಕ್ಷಿಸಲು ಹಾರಿದ ಎರಡು ತಿಂಗಳ ಗರ್ಭಿಣಿ ತಬಸುಮ್ ಖಾನಂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, ಮಕ್ಕಳನ್ನು ಪಾರು ಮಾಡಿದ ತಾಯಿ ಬಾರದ ಲೋಕಕ್ಕೆ ತೆರಳಿದ್ದಾರೆ.
ಕೆರೆಯಿಂದ ಹೊರ ತೆಗೆಯುತ್ತಿರುವ ಮೃತದೇಹ, ಮೃತದೇಹದ ಮುಂದೆ ಗೋಳಾಡುತ್ತಿರುವ ದೃಶ್ಯಗಳು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಚಿಂತಾಮಣಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮುರುಗಮಲ್ಲ ಗ್ರಾಮದಲ್ಲಿ. ಇಲ್ಲಿನ ಅಮ್ಮಾಜಾನ್ ಬಾಬಾಜಾನ್ ದರ್ಶನಕ್ಕೆಂದು ಭಕ್ತ ಸಾಗರವೇ ಹರಿದುಬರುತ್ತದೆ. ಆದರೆ, ಇಲ್ಲೇ ಸಂಭವಿಸಿದ ಒಂದು ಘೋರ ದುರಂತ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ದುರಂತದಲ್ಲಿ ಕೊನೆಯುಸಿರೆಳೆದ ಮಹಿಳೆಯ 24 ವರ್ಷದ ತಬಸುಮ್ ಖಾನಂ, ಅದೃಷ್ಟವಶಾತ್ ಅಲ್ಲೇ ಇದ್ದ ತಂದೆ ಹಾಗೂ ಸಂಬಂಧಿ ಯುವಕರು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡಿದರೂ ಪತ್ನಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಗಂಡ ಕಣ್ಣೀರಿಟ್ಟಿದ್ದಾನೆ.
ಇವರು ಮೂಲತಃ ಬೆಂಗಳೂರಿನ ಬನಶಂಕರಿ ಮೂಲದವರು. ತನ್ನ ಮಕ್ಕಳೊಂದಿಗೆ ದರ್ಗಾದ ದರ್ಶನಕ್ಕೆಂದು ಮುರುಗಮಲ್ಲಕ್ಕೆ ಬಂದಿದ್ದರು. ದರ್ಶನದ ಬಳಿಕ ಕೆರೆಯ ಬಳಿ ಹೋದಾಗ ವಿಧಿ ಅಟ್ಟಹಾಸವೇ ಮೆರೆದಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
02/05/2026 02:48 pm