ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಅಪೂರ್ಣ ದಸರಾ ಲೆಕ್ಕಕ್ಕೆ ಮತ್ತಷ್ಟು ಕೆರಳಿದ ಜನ - ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಮೈಸೂರು: ಕಳೆದ ಅಕ್ಟೋಬರ್‌ನಲ್ಲಿ ಮುಕ್ತಾಯಗೊಂಡ ದಸರಾ ಮಹೋತ್ಸವದ ಖರ್ಚು ವೆಚ್ಚದ ವಿವರಗಳನ್ನು ಜಿಲ್ಲಾಡಳಿತ ಕೊನೆಗೂ ಬಿಡುಗಡೆ ಮಾಡಿದೆ. ದಸರಾ ಮುಗಿದು ಆರು ತಿಂಗಳು ಕಳೆದರೂ ಲೆಕ್ಕಪತ್ರಗಳನ್ನು ನೀಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಟೀಕೆಗಳ ಬೆನ್ನಲ್ಲೇ ಜಿಲ್ಲಾಡಳಿತ ಈಗ ದಸರಾ ಖರ್ಚು ವೆಚ್ಚವನ್ನು ಸಾರ್ವಜನಿಕವಾಗಿ ಪ್ರಕಟಿಸಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ದಸರಾ ಮಹೋತ್ಸವಕ್ಕೆ ಒಟ್ಟು 45 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇದರಲ್ಲಿ ಸರ್ಕಾರದಿಂದ 30 ಕೋಟಿ ರೂ. ಅನುದಾನ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MDA) 10 ಕೋಟಿ ರೂ., ಪ್ರಾಯೋಜಕತ್ವದಿಂದ 1.81 ಕೋಟಿ ರೂ. ಹಾಗೂ ಟಿಕೆಟ್ ಮಾರಾಟದಿಂದ 3.21 ಕೋಟಿ ರೂ. ಸಂಗ್ರಹವಾಗಿದೆ.

ಅಪೂರ್ಣ ಲೆಕ್ಕಕ್ಕೆ ಆಕ್ರೋಶ

ಆದರೆ, ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಈ ಲೆಕ್ಕಪತ್ರಗಳು ಸಮಗ್ರವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ದಸರಾ ಖರ್ಚು ವೆಚ್ಚದ 'ಪರಿಪೂರ್ಣ ಲೆಕ್ಕ' ನೀಡದ ಜಿಲ್ಲಾಡಳಿತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Edited By : Vijay Kumar
PublicNext

PublicNext

05/05/2026 09:14 am

Cinque Terre

6.58 K

Cinque Terre

0