ಮಡಿಕೇರಿ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ನಗರದ ಗಾಂಧಿ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026 ರ ಕಾರ್ಯಕ್ರಮ ನಡೆಯಿತು.
ಸೆಸ್ಕ್ ನಿರ್ದೇಶಕ(ತಾಂತ್ರಿಕ)ರಾಗಿರುವ ಶರಣಮ್ಮ ಎಸ್. ಜಂಗಿನರವರು ಮಾತನಾಡಿ, ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ತಂದೆ ತಾಯಿಯರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವ ಹೆಣ್ಣು ಮಕ್ಕಳು, ಅತ್ತೆ ಮಾವರನ್ನ ಅದೇ ರೀತಿ ಅದೇ ಚೆನ್ನಾಗಿ ನೋಡಿಕೊಳ್ಳಬೇಕು, ಆಗ ಸಂಸಾರ ಮತ್ತು ಸಂಬಂಧಕ್ಕೆ ಒಂದು ಅರ್ಥ ಎನ್ನುವ ಕಿವಿಮಾತು ಹೇಳಿದರು.
ಅಂತೆಯೇ ಹೆಣ್ಣು ಮಕ್ಕಳು ಮನೆ ಹಾಗೂ ಕಚೇರಿ ಕೆಲಸ ಅಂತ ಎರಡು ಕಡೆ ಸ್ಟ್ರೆಸ್ ತಗೋತಾರೆ. ಅವರಿಗೆ ತುಂಬಾ ಸಹನೆ ಇದೆ, ಅವಳು ಸಹನೆ ಮತ್ತು ಪ್ರೀತಿ ಇಂದಲೇ ಎಲ್ಲವನ್ನೂ ನಿಭಾಯಿಸ್ತಾಳೆ ಎಂದು ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ. ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಡಳಿತಾಧಿಕಾರಿ ಪ್ರಭಾವತಿ ಕೆ.ಎಚ್. ಅವರು ಮಹಿಳೆಯರು ಅಬಲೆಯಲ್ಲ, ಸಬಲೆ. ಏನೇ ಸಮಸ್ಯೆ ಇದ್ರೂ ಹೇಳಿಕೊಳ್ಳುವಂತಾಗಬೇಕು ಎಂದರು. ನಿಮ್ಮ ಸಮಸ್ಯೆಗಳನ್ನ ಬಗೆಹರಿಸಲೆಂದೇ ನಮ್ಮೀ ಸಖಿ ಒನ್ ಸ್ಟಾಪ್ ಸೆಂಟರ್ ಇರೋದು.. ಧೈರ್ಯವಾಗಿ ಮುಂದೆ ಸಾಗಿ ಎಂಬ ಧೈರ್ಯದ ಮಾತುಗಳನ್ನು ಆಡಿ, ಸೂಚನೆ, ಸಲಹೆಗಳನ್ನು ನೀಡಿದ್ದಾರೆ.
Kshetra Samachara
23/05/2026 07:08 am
LOADING...