ಲಕ್ನೋ: ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ಉತ್ತರ ಪ್ರದೇಶದ ವರಾಹ್ ಘಾಟ್‌ನ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ್ದಾರೆ.
ಐಪಿಎಲ್ 2026ರ ಟೂರ್ನಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಗೆದ್ದ ನಂತರದ ಈ ಭೇಟಿ ಕುತೂಹಲ ಹೆಚ್ಚಿಸಿದೆ. ಗಮನಾರ್ಹವಾಗಿ, ಐಪಿಎಲ್ 2026 ರ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಅಜೇಯ 75 ರನ್ (42 ಎಸೆತ) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ, ಐಪಿಎಲ್ ಋತುವಿಗೆ ಮುನ್ನ ಅಕ್ಷಯ ತೃತೀಯದಂದು ಸಹ ವಿರುಷ್ಕಾ ದಂಪತಿ ಇದೇ ಆಶ್ರಮಕ್ಕೆ ಭೇಟಿ ನೀಡಿದ್ದರು.
PublicNext
02/06/2026 03:01 pm
LOADING...