ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಾತನ ಪ್ರೀತಿ ಮರೆತಿಲ್ಲ ನವರಸ ನಾಯಕ: ಮೊಮ್ಮಗ ಅರ್ಜುನ್‌ಗೆ ಜಗ್ಗೇಶ್ ಕೊಟ್ಟ ಸರ್ಪ್ರೈಸ್ ಗಿಫ್ಟ್ ಏನು ಗೊತ್ತಾ?

ಬೆಂಗಳೂರು : ನವರಸ ನಾಯಕ ಜಗ್ಗೇಶ್‌ ಅಂದ್ರೆ ಕೇವಲ ಬೆಳ್ಳಿಪರದೆಯ ನಟ ಅಷ್ಟೇ ಅಲ್ಲ, ಅವರು ಕೌಟುಂಬಿಕ ಮೌಲ್ಯಗಳಿಗೆ, ಸಂಸ್ಕಾರಕ್ಕೆ ಅತಿ ಹೆಚ್ಚು ಒತ್ತು ಕೊಡುವ ಅಪರೂಪದ ವ್ಯಕ್ತಿತ್ವ. ತಾವು ಬೆಳೆದು ಬಂದ ಹಾದಿ, ತಮ್ಮತನದ ಬೇರುಗಳು ಹಾಗೂ ಮುಖ್ಯವಾಗಿ ತಮ್ಮ ತಾತನ ಜೊತೆಗಿನ ಒಡನಾಟವನ್ನು ಜಗ್ಗೇಶ್ ಅವರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ತಮಗೆ ಸಿನಿಮಾದ ಬಗ್ಗೆ ಆಸಕ್ತಿ ಮೂಡಿದ್ದೇ ಅಂದು ತಾತ ತೋರಿಸುತ್ತಿದ್ದ ಟೆಂಟ್‌ ಸಿನಿಮಾಗಳಿಂದ ಅನ್ನೋದನ್ನು ಅವರು ಎಂದಿಗೂ ಮರೆತಿಲ್ಲ.

ಅಂದು ತಾತನಿಂದ ಅಪಾರ ಪ್ರೀತಿ ಪಡೆದಿದ್ದ ಜಗ್ಗೇಶ್, ಇಂದು ತಾವೇ ತಾತನಾಗಿದ್ದು, ಅದೇ ಪ್ರೀತಿ ಮತ್ತು ಸ್ನೇಹವನ್ನು ತಮ್ಮ ಮುದ್ದಿನ ಮೊಮ್ಮಗನಿಗೆ ಧಾರೆ ಎರೆಯುತ್ತಿದ್ದಾರೆ. ವಿದೇಶಿ ಸೊಸೆ, ಕನ್ನಡಿಗ ಮೊಮ್ಮಗ

ನಟ ಜಗ್ಗೇಶ್ ಹಾಗೂ ಪರಿಮಳಾ ದಂಪತಿಯ ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಅವರ ಪತ್ನಿ ಕೇಟಿ ಪೈಲ್ ಮೂಲತಃ ವಿದೇಶದವರಾಗಿದ್ದರೂ, ನಮ್ಮ ಸಂಸ್ಕೃತಿಯನ್ನು ಅಪ್ಪಿಕೊಂಡಿದ್ದಾರೆ. ಸೊಸೆ ಕೇಟಿ ಅವರ ಸಂಸ್ಕಾರ ಮತ್ತು ಕನ್ನಡ ಕಲಿಕೆಯನ್ನು ಜಗ್ಗೇಶ್ ಹಲವು ಬಾರಿ ಕೊಂಡಾಡಿದ್ದಾರೆ. ಈ ದಂಪತಿಯ ಮುದ್ದಿನ ಮಗನೇ ಅರ್ಜುನ್. ಸದ್ಯ ಅರ್ಜುನ್‌ಗೆ 11ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ಮೊಮ್ಮಗನ ಆಸೆ ಈಡೇರಿಸಿದ ತಾತ ಜಗ್ಗೇಶ್

ಜೂನ್ 2ರಂದು ಅರ್ಜುನ್ ಹುಟ್ಟುಹಬ್ಬದ ಅಂಗವಾಗಿ ತಾತ ಜಗ್ಗೇಶ್ ಅವರು ಮೊಮ್ಮಗನಿಗೆ ಒಂದು ವಿಶೇಷವಾದ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ. 11ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಇನ್ಮುಂದೆ ಶಾಲೆಯಲ್ಲಿ ಲ್ಯಾಪ್ ಟಾಪ್ ಬಳಕೆ ಶುರುವಾಗುತ್ತದೆ. ನನಗೊಂದು ಲ್ಯಾಪ್ ಟಾಪ್ ಕೊಡಿಸುತ್ತೀರಾ? ಎಂದು ಅರ್ಜುನ್ ತನ್ನ ತಂದೆ ಗುರುರಾಜ್ ಬಳಿ ಕೇಳಿದ್ದನಂತೆ. ಈ ವಿಷಯ ತಾತ ಜಗ್ಗೇಶ್ ಅವರ ಕಿವಿಗೆ ಬೀಳುತ್ತಿದ್ದಂತೆ ತಡ ಮಾಡದೆ, ಮೊಮ್ಮಗನಿಗೆ ಸರ್‌ಪ್ರೈಸ್ ಆಗಿ ಬೆಲೆಬಾಳುವ ಲ್ಯಾಪ್‌ಟಾಪ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮೊಮ್ಮಗನ ಕನಸುಗಳಿಗೆ, ವಿದ್ಯಾಭ್ಯಾಸಕ್ಕೆ ಸದಾ ಬೆಂಬಲವಾಗಿ ನಿಲ್ಲುವ ತಾತನ ಈ ಪ್ರೀತಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅಂದು ತಮ್ಮ ತಾತನ ಪ್ರೀತಿಯನ್ನು ಉಂಡಿದ್ದ ಜಗ್ಗಣ್ಣ, ಇಂದು ತಮ್ಮ ಮೊಮ್ಮಗ ಅರ್ಜುನ್ ಪಾಲಿಗೆ ಬೆಸ್ಟ್ ಫ್ರೆಂಡ್ ಹಾಗೂ ಬೆಸ್ಟ್ ತಾತನಾಗಿ ಜವಾಬ್ದಾರಿ ಮೆರೆದಿದ್ದಾರೆ.

Edited By :
PublicNext

PublicNext

03/06/2026 06:15 pm

Cinque Terre

17.55 K

Cinque Terre

4

ಸಂಬಂಧಿತ ಸುದ್ದಿ