ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ: ಅಮೆರಿಕದಲ್ಲಿ ತ್ರಿವರ್ಣ ಧ್ವಜ ಹರಿದು ವಿಕೃತಿ - ವೈರಲ್ ವಿಡಿಯೋಗೆ ಭಾರತೀಯರ ಆಕ್ರೋಶ

ದೆಹಲಿ: ದೇಶಪ್ರೇಮವನ್ನು ಸಾರುವ ಅನೇಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದನ್ನು ನಾವು ನೋಡಿದ್ದೇವೆ. ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು, ರಾಷ್ಟ್ರಗೀತೆಯನ್ನು ಗೌರವಿಸುವುದು ಇತ್ಯಾದಿ. ಆದರೆ, ಭಾರತದ ವಿರುದ್ಧ ದ್ವೇಷ ಸಾಧಿಸುವ ಕಿಡಿಗೇಡಿಗಳೂ ಇರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಮೆರಿಕದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬ ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿ ವಿಕೃತಿ ಮೆರೆದಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಟೆಕ್ಸಾಸ್‌ನ ಫ್ರಿಸ್ಕೋ ಸಿಟಿ ಹಾಲ್ ಹೊರಗೆ ಈ ಘಟನೆ ನಡೆದಿದೆ. ಸಾರ್ವಜನಿಕವಾಗಿಯೇ ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ, ಸಿಗರೇಟ್ ಸೇದುತ್ತಾ ನಿಂತಿದ್ದ ವ್ಯಕ್ತಿಯೊಬ್ಬ ಹರ್ಷೋದ್ಗಾರ ಮಾಡುತ್ತಿದ್ದ ಜನರ ಗುಂಪಿನ ಮುಂದೆ ಭಾರತದ ಧ್ವಜವನ್ನು ಕೈಯಲ್ಲಿ ಹಿಡಿದು ಹರಿದು ಹಾಕಿದ್ದಾನೆ. ಈ ವೇಳೆ ಅಲ್ಲಿದ್ದ ಕೆಲವರು ಆತನನ್ನು ಹುರಿದುಂಬಿಸಿರುವುದು ಕಂಡುಬಂದಿದೆ.

ಉತ್ತರ ಡಲ್ಲಾಸ್‌ನಲ್ಲಿ ಭಾರತೀಯ ವಲಸಿಗರ ಸಂಖ್ಯೆ ಹೆಚ್ಚಳವನ್ನು ವಿರೋಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. 'ಭಾರತೀಯ ವಲಸೆ ಆಕ್ರಮಣ' ಎಂದು ಬಣ್ಣಿಸಿ ಈ ಕೃತ್ಯವನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿಶ್ವದಾದ್ಯಂತ ಇರುವ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವನ್ನು ಖಂಡಿಸಿದ ಓರ್ವರು, "ಇದು ಅನ್ಯಾಯ. ದ್ವೇಷ ಎಂದಿಗೂ ಒಳ್ಳೆಯದಲ್ಲ. ವಲಸಿಗರ ವಿರುದ್ಧ ನೀವು ಸಭ್ಯವಾಗಿ ಮತ್ತು ಗೌರವದಿಂದ ಧ್ವನಿ ಎತ್ತಬಹುದು. ಆದರೆ, ಈ ರೀತಿ ದ್ವೇಷ ಮೆರೆಯುವುದು ತಪ್ಪು" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, "ವಿದೇಶದಲ್ಲಿ ಭಾರತೀಯರ ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸ್ಥಳೀಯ ಉದ್ಯೋಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಇಂತಹ ದ್ವೇಷ" ಎಂದು ಅಭಿಪ್ರಾಯಪಟ್ಟಿದ್ದಾರೆ.

Edited By :
PublicNext

PublicNext

03/06/2026 08:22 pm

Cinque Terre

11.49 K

Cinque Terre

9

ಸಂಬಂಧಿತ ಸುದ್ದಿ