ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರದಲ್ಲಿ ತಂಪೆರೆದ ಮಳೆರಾಯ : ಸುಡುಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಆಹ್ಲಾದ!

ವಿಜಯಪುರ: ಬೀಸಿಲಿನಿಂದ ಬೇಸತ್ತಿದ್ದ ವಿಜಯಪುರ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.‌ ನಿನ್ನೆ ಸಂಜೆಯಿಂದ ಬೆಳಗಿನವರೆಗೂ ಬಿರುಸಿನ ಮಳೆ‌ ಸುರಿದಿದೆ. ಬಬಲೇಶ್ವರ ತಾಲೂಕು, ತಿಕೋಟಾ ತಾಲೂಕಿನ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಗಾಳಿ ಸಹಿತ ಮಳೆ ಸುರಿದಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯಲ್ಲಿ ಇಂದು ಕೂಡಾ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆ ಪರಿಣಾಮ ಮುಂಗಾರು ಬಿತ್ತನೆಯ ಚಟುವಟಿಕೆಗಳು ಆರಂಭವಾಗಲಿವೆ.

Edited By :
PublicNext

PublicNext

24/05/2026 01:58 pm

Cinque Terre

5.86 K

Cinque Terre

0