ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಸಮಗ್ರ ಕೃಷಿ ಮಾಡಿ ಸೈ ಎನಿಸಿಕೊಂಡ ರೈತ ರಾಜೇಂದ್ರ ಭೋಸಲೆ

ವಿಜಯಪುರ: ಸಮಗ್ರ ಕೃಷಿ ಮಾಡಿ ಸೈ ಎನಿಸಿಕೊಂಡ ರೈತ ರಾಜೇಂದ್ರ ಭೋಸಲೆ...

ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಯಲ್ಲಿ ರೈತನೊರ್ವ ಸಮಗ್ರ ಕೃಷಿ ಪದ್ದತ್ತಿ ಅಳವಡಿಸಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾನೆ.

ಹೌದು..!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಪ್ರಗತಿ ಪರ ರೈತ ರಾಜೇಂದ್ರ ಭೋಸಲೆ ತಮ್ಮ ತೋಟದಲ್ಲಿ ಸುಮಾರು 13 ಎಕರೆ ಪ್ರದೇಶದಲ್ಲಿ ಸಾವಯುವ ಪದ್ದತಿಯ ಮೂಲಕ ಸಮಗ್ರ ಕೃಷಿ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ವಿದೇಶದಲ್ಲಿ ಬೆಳೆಯುವ ಸುಮಾರು 30 ಬಗೆ ಹಣ್ಣುಗಳನ್ನು ತಮ್ಮ ತೋಟದಲ್ಲಿ ಬೆಳೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ತಮ್ಮ ತೋಟದಲ್ಲಿ 100 ಹುಣಸೆ ಹಣ್ಣಿನ ಗಿಡಗಳನ್ನು ನೆಡಲಾಗಿದ್ದು ಅವುಗಳನ್ನ ರಾಸಾಯನಿಕ ಮುಕ್ತವಾಗಿ ಬೆಳೆಸುತ್ತಿದ್ದಾರೆ. ಜೊತೆಗೆ ಮೂರು ಎಕರೆ ಪ್ರದೇಶದಲ್ಲಿ 100 ಸೀತಾಫಲ ಹಣ್ಣುಗಳನ್ನು ಹಾಗೂ ದಾಳಿಂಬೆ ಹಣ್ಣಿನ ಬೆಳೆ ಬೆಳೆದಿದ್ದು, ಈಗಾಗಲೇ ದಾಳಿಂಬೆಯಿಂದ ಕಳೆದ ವರ್ಷ 35 ಲಕ್ಷದಷ್ಟು ಆದಾಯವನ್ನು ಪಡೆದುಕೊಂಡಿದ್ದಾರೆ.

ಇನ್ನೂ ತೋಟದಲ್ಲಿ ಮಾವಿನ ಹಣ್ಣು, ನೋನಿ ಹಣ್ಣು, ವಾಟರ್ ಆ್ಯಪಲ್, ರೆಡ್ ಆ್ಯಪಲ್, ಕವಳೆ ಹಣ್ಣು ಹೀಗೆ ಹಲವು ಬಗೆಯ ಹಣ್ಣನ್ನು ಬೆಳೆಯುತ್ತಿದ್ದಾರೆ‌‌‌‌...

ಇಷ್ಟೇ ಅಲ್ಲದೇ ಬಾಳೆ ಹಣ್ಣಿನ ಗಿಡಗಳ ಜೊತೆಗೆ ಅಡಿಕೆ ಬೆಳೆದಿದ್ದಾರೆ, ಅವುಗಳು ಸಹಿತ ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆಯುತ್ತಾರೆ. ಇನ್ನೂ ತಮ್ಮ ತೋಟದಲ್ಲಿ ಸುಮಾರು ಎರಡು ನೂರು ಮಾವಿನ ಮರಗಳನ್ನು ಸಾವಯವ ಪದ್ಧತಿ ಮೂಲಕ 100 ಕೇಸರ ಮಾವಿನ ಹಣ್ಣಿನ ಮರ, 100 ಆಪುಸ್ ಮಾವಿನ ಹಣ್ಣು ಹಾಗೂ ವಿವಿಧ ಹಣ್ಣನ್ನು ಬೆಳಯುತ್ತಿದ್ದಾರೆ‌. ಕಾಸರಗೋಡು ಗೋಡಂಬೆ ಕೂಡ ಬೆಳೆದು ಈ ಭಾಗದಲ್ಲಿ ಯಶಸ್ಸು ಕಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಗೋಡಂಬೆ ಬೆಳೆಯಲು ಆಗಲ್ಲ ಎಂಬುವರಿಗೆ ಅದನ್ನು ಇವರು ಬೆಳೆದು ತೋರಿಸಿದ್ದಾರೆ. ಅರಿಶಿಣದ ಅಗಿಗಳನ್ನು ನೆಟ್ಟು, ಅದರಿಂದ ಶುದ್ದವಾದ ಅರಿಶಿಣದ ಬೆಳೆಗಳನ್ನು ಕೂಡಾ ಬೆಳೆಯುತ್ತಿದ್ದಾರೆ. ಇವರ ತೋಟದಲ್ಲಿ ಸುಮಾರು 1500 ಶ್ರೀಗಂಧದ ಮರಗಳನ್ನು ಬೆಳೆಯುತ್ತಿದ್ದಾರೆ. ಸುಮಾರು ಎರಡು ಸಾವಿರ ರಕ್ತ ಚಂದನದ ಗಿಡಗಳನ್ನು ನೆಟ್ಟು ಆರು ವರ್ಷದಿಂದ ಅವುಗಳ ಪಾಲನೆ ಪೊಷಣೆ ಮಾಡುತ್ತಿದ್ದು, ಈ ಗಿಡಗಳ ಮದ್ಯದಲ್ಲಿ ದಾಳಿಂಬೆ ಬೆಳೆದು ಅದರ ಲಾಭ ಪಡೆಯುತ್ತಿದ್ದಾರೆ. ಕಳೆದ 20 ವರ್ಷಗಳಿಂದ ದಾಂಡೇಲಿಯ ಸಾಗುವಾನಿ ಮರಗಳನ್ನು ಬೆಳೆಯುತ್ತಿದ್ದಾರೆ, ಅವುಗಳು ಈಗ ಸುಮಾರು 40 ಅಡಿಯಷ್ಟು ಬೆಳೆದು ನಿಂತಿವೆ. ರಾಜೇಂದ್ರ ಭೋಸಲೆ ಅವರ ಕಾರ್ಯಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ‌‌‌‌‌‌...

ಬರಡ ಭೂಮಿ, ಗುಡ್ಡ ಗಾಡು ಪ್ರದೇಶದಂತಹ ಭೂಮಿಯಲ್ಲಿ ಕಡಿಮೆ ನೀರಿನಲ್ಲಿ, ಯಾವ ಹಣ್ಣು ಈ ಭಾಗದಲ್ಲಿ ಬೆಳೆಯಲಾಗಲ್ಲ ಅಂತಾರೆ ಅಂತಹ ಹಣ್ಣಿನ ಜೊತೆಗೆ ವಿವಿಧ ಬಗೆ ಹಣ್ಣು ಬೆಳೆಯುವ ಮೂಲಕ ರಾಜೇಂದ್ರ ಭೋಸಲೆ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಪಬ್ಲಿಕ್ ನೆಕ್ಸ್ಟ ವಿಜಯಪುರ

Edited By :
PublicNext

PublicNext

25/05/2026 05:57 pm

Cinque Terre

5.94 K

Cinque Terre

0