ಬ್ರಹ್ಮಾವರ: 365 ದೇವಾಲಯಗಳ ನಗರ ಬಾರಕೂರು ಪ್ರವೇಶ ಪಡೆಯುವಾಗಲೇ ಸಿಗುವ ಹೊಸ್ಕೆರೆ ಶ್ರೀ ಮಹಾಗಣಪತಿ ದೇವಸ್ಥಾನದ ತೀರ್ಥ ಸರೋವರಕ್ಕೆ ಇದರ ಸನಿಹ ಇರುವ ಬಹುಮಹಡಿಯ ಕಟ್ಟಡದ ತಳ ಭಾಗದ ಪೈಪ್ ಮೂಲಕ ಕಲುಷಿತ ತ್ಯಾಜ್ಯ ನೀರು ಇಲ್ಲಿನ ದೇವಸ್ಥಾನದ ತೀರ್ಥ ಸರೋವರಕ್ಕೆ ಸಂಪರ್ಕ ಪಡೆದುಕೊಂಡಿದೆ.
ರಾಜ್ಯ ಹೆದ್ದಾರಿ ಉಡುಪಿಯಿಂದ ಬಾರಕೂರು, ಬಿದ್ಕಲ್‌ಕಟ್ಟೆ ಸಿದ್ದಾಪುರ ಮೂಲಕ ಸಾಗರ, ಶಿವಮೊಗ್ಗಕ್ಕೆ ಸಂಪರ್ಕದ ರಸ್ತೆಯ ಬದಿಯಲ್ಲಿ ಇರುವ ಈ ದೇವಸ್ಥಾನ ಎದುರು ಭಾಗದಲ್ಲಿರುವ ತೀರ್ಥ ಸರೋವರಕ್ಕೆ ಸೇರುವ ಈ ಕಲುಷಿತ ನೀರಿನ ದುರ್ಗಂಧ ಈಗಾಗಲೇ ಶೇಖರಣೆಗೊಂಡು ವಾಸನೆ ಬೀರುತ್ತಿದ್ದು ರಸ್ತೆಯಲ್ಲಿ ಸಂಚರಿಸುವವರಿಗೆ ವಾಂತಿಯ ಅನುಭವ ತರಿಸುತ್ತದೆ.
ಕಟ್ಟಡ ನಿರ್ಮಾಣ ಸಮಯದಲ್ಲಿ ಸರಿಯಾದ ನೀರು ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡದೆ ನೀಡುವ ಪರವಾನೆಯಿಂದ ಇಂತಹ ಅವಾಂತರಗಳು ಉಂಟಾಗುತ್ತಿದ್ದು ಸಂಬಂಧ ಪಟ್ಟ ಗ್ರಾಮಪಂಚಾಯಿತಿ ಅಥವಾ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿ ಧಾರ್ಮಿಕ ಪಾವಿತ್ರ್ಯತೆಗೆ ಮಹತ್ವ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕಾಗಿದೆ.
PublicNext
24/05/2026 07:55 pm
LOADING...