ಮೈಸೂರು : ಸ್ಯಾಂಡಲ್‌ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಗ್ಲಾಮರಸ್ ಬ್ಯೂಟಿ ದೀಪಿಕಾ ದಾಸ್ ಈಗ ಉದ್ಯಮ ರಂಗಕ್ಕೆ ಧುಮುಕಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ಜರಿಯಾಗಿ ತಮ್ಮದೇ ಆದ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ಡಬಲ್ ರೋಡ್ ಬಳಿ ‘ಪೆವಿಲಿಯನ್ ಲಾಂಜ್’ (Pavilion Lounge) ಹೆಸರಿನ ಅತ್ಯಾಧುನಿಕ ಹಾಗೂ ಐಷಾರಾಮಿ ಸಲೂನ್ ಅನ್ನು ದೀಪಿಕಾ ದಾಸ್ ಅದ್ಧೂರಿಯಾಗಿ ಲಾಂಚ್ ಮಾಡಿದ್ದಾರೆ.
ಇನ್ನು ಈ ಗ್ರಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರ ದಂಡೇ ಹರಿದುಬಂದಿತ್ತು. ಕಿರುತೆರೆ ಮತ್ತು ಬೆಳ್ಳಿ ತೆರೆಯ ಸಾಕಷ್ಟು ಸೆಲೆಬ್ರಿಟಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ರಿಬ್ಬನ್ ಕತ್ತರಿಸುವ ಮೂಲಕ ದೀಪಿಕಾ ದಾಸ್ ಅವರ ಹೊಸ ಉದ್ಯಮಕ್ಕೆ ಸಾಥ್ ನೀಡಿದರು.
ಬಳಿಕ ಮಾತನಾಡಿದ ತಾರೆಯರು, ದೀಪಿಕಾ ದಾಸ್ ಅವರ ಕ್ರಿಯೇಟಿವಿಟಿ ಹಾಗೂ ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, 'ಪೆವಿಲಿಯನ್ ಲಾಂಜ್' ಮೈಸೂರಿನ ಜನರ ನೆಚ್ಚಿನ ಸ್ಪಾಟ್ ಆಗಲಿ ಎಂದು ಮನಸಾರೆ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ನಟನೆಯ ಜೊತೆಗೆ ಬ್ಯುಸಿನೆಸ್ ವುಮನ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿರೋ ದೀಪಿಕಾ ದಾಸ್ ಅವರಿಗೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್!
PublicNext
25/05/2026 07:40 pm
LOADING...