ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ನಮ್ಮ ರೇಂಜ್ ರೋವರ್" ಚಿತ್ರದ ಟೀಸರ್ ಔಟ್ : ನಾಯಕನಾಗಿ ಡ್ಯಾನ್ಸ್ ಮಾಸ್ಟರ್ ಆಟ ಸಂದೀಪ್ ಎಂಟ್ರಿ!

ಬೆಂಗಳೂರು : ಸಿ.ಎಮ್.ಎಮ್ ಹಿಂದೂಸ್ತಾನ್ ಫಿಲಂಸ್ ಲಾಂಛನದಲ್ಲಿ ಡಾ| ಮೌಲಾ ಶರೀಫ್ ಸಿ.ಕೆ ನಿರ್ಮಿಸಿರುವ ಮತ್ತು ಓ.ಎಸ್.ಆರ್ ಕುಮಾರ್ ನಿರ್ದೇಶಿಸಿರುವ "ನಮ್ಮ ರೇಂಜ್ ರೋವರ್" ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಕೂಡಲಸಂಗಮದ ಪೂಜ್ಯ ಶ್ರೀ ಸಂಗಮಾನಂದ ಸ್ವಾಮಿಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಹಾಡುಗಳು ಹಾಗೂ ಟೀಸರ್ ಅನ್ನು ಲೋಕಾರ್ಪಣೆ ಮಾಡಿದರು.

ಸಮಾರಂಭದಲ್ಲಿ ಮಾಜಿ ಶಾಸಕ ರಾಜಣ್ಣ, ಉದ್ಯಮಿ ವೀರಭದ್ರಾಚಾರಿ, ತೆಲುಗು ನಟ ಸಂಪೂರ್ಣೇಶ್ ಬಾಬು, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಕಿಶೋರ್ ಕುಮಾರ್, ರಮೇಶ್ ಯಾದವ್, ರಮೇಶ್ ಬಾಬು ಮತ್ತು ಉಮೇಶ್ ಬಣಕಾರ್ ಮುಂತಾದ ಗಣ್ಯರು ಭಾಗವಹಿಸಿ ಚಿತ್ರತಂಡಕ್ಕೆ ತಮ್ಮ ಪ್ರೋತ್ಸಾಹದ ಮಾತುಗಳ ಮೂಲಕ ಶುಭ ಹಾರೈಸಿದರು.

ಈ ಚಿತ್ರದ ಮೂಲಕ ತೆಲುಗಿನ ಪ್ರಸಿದ್ಧ ನೃತ್ಯ ನಿರ್ದೇಶಕ ಆಟ ಸಂದೀಪ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರಾಜಸ್ಥಾನ ಮೂಲದ ಮೇಘನಾ ರಜಪೂತ್ ಈ ಚಿತ್ರದ ನಾಯಕಿಯಾಗಿದ್ದು, ಅರವಿಂದ್ ರಾವ್, ಬ್ಯಾಂಕ್ ಜನಾರ್ದನ್ ಮತ್ತು ಯತಿರಾಜ್ ಮುಂತಾದ ಅನುಭವಿ ಕಲಾವಿದರು ತಾರಾಗಣದಲ್ಲಿದ್ದಾರೆ. ಕಿರುಚಿತ್ರಗಳ ನಿರ್ದೇಶನದ ಅನುಭವ ಹೊಂದಿರುವ ಓ.ಎಸ್.ಆರ್ ಕುಮಾರ್ ಅವರಿಗೆ ಇದು ಮೊದಲ ಹಿರಿತೆರೆಯ ಸಿನಿಮಾವಾಗಿದೆ.

ಚಿತ್ರಕ್ಕೆ ಸತ್ಯ ಸೋಮೇಶ್ ಸಂಗೀತ ನೀಡಿದ್ದು, ಹಾಡುಗಳು ಮತ್ತು ಟೀಸರ್ 'ಸಿರಿ ಮ್ಯೂಸಿಕ್' ಆಡಿಯೋ ಸಂಸ್ಥೆಯ ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ರಾಜಾ ಶಿವಶಂಕರ್ ಛಾಯಾಗ್ರಹಣ ಹಾಗೂ ಗುರುಪ್ರಸಾದ್ ಸಂಕಲನವಿರುವ ಈ ಚಿತ್ರಕ್ಕೆ ದುಬಾರಿ ಕಾರಿನ ಶೀರ್ಷಿಕೆಯನ್ನು ಇಡಲಾಗಿದ್ದು, ಇದು ಕಥೆಗೆ ಸಂಪೂರ್ಣ ಪೂರಕವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಬಾಗೇಪಲ್ಲಿ ಮೂಲದವರಾದ ಹಾಗೂ ಸುಪ್ರೀಂಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ನಿರ್ಮಾಪಕ ಡಾ|| ಮೌಲಾ ಶರೀಫ್ ಅವರಿಗೆ ಇದು ಮೂರನೇ ಚಿತ್ರವಾಗಿದೆ

. ಡಾ. ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಿ ಬೆಳೆದ ಇವರು, ಉಮೇಶ್ ಬಣಕಾರ್ ಅವರ ಪ್ರೇರಣೆಯಿಂದ ಚಿತ್ರರಂಗಕ್ಕೆ ಬಂದು ಈ ಸದಭಿರುಚಿಯ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಟ ಸನತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರತಂಡವು ಸಿನಿಮಾವನ್ನು ಮುಂದಿನ ತಿಂಗಳು ತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Edited By : Abhishek Kamoji
PublicNext

PublicNext

10/06/2026 10:51 am

Cinque Terre

13.85 K

Cinque Terre

0

ಸಂಬಂಧಿತ ಸುದ್ದಿ