ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನರಂಜನಾ ಲೋಕಕ್ಕೆ ಆಘಾತ : 'ಕುಂಕುಮ ಭಾಗ್ಯ' ನಟಿ ಸಂಚಿತಾ ಉಗಲೆ ನೇಣಿಗೆ ಶರಣು

ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಸುದ್ದಿ ಮನರಂಜನಾ ಲೋಕದಲ್ಲಿ ತೀವ್ರ ಆಘಾತ ಮೂಡಿಸಿದೆ. ಭಾನುವಾರ ಸಂಜೆ ಸುಮಾರು 5:30ರ ವೇಳೆಗೆ ಈ ಘಟನೆ ನಡೆದಿದೆ. ಸಂಚಿತಾ ಅವರ ಸಹೋದರಿ ಅಂಜಲಿ ಮನೆಯಿಂದ ಹೊರಗೆ ಹೋಗಿದ್ದಾಗ, ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಈ ಸಂದರ್ಭದಲ್ಲಿ ನಟಿ ಸಂಚಿತಾ ತಮ್ಮ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ತುಲಿಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಸದ್ಯ ಅಚೋಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 194 ರ ಅಡಿಯಲ್ಲಿ ಅಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.

ಸಂಚಿತಾ ಉಗಲೆ ಹಿಂದಿಯ 'ದಿಲ್‌ವಾಲಿ ದುಲ್ಹಾ ಲೇ ಜಾಯೇಗಿ' ಧಾರಾವಾಹಿಯಲ್ಲಿ 'ಸುಕೂನ್' ಎಂಬ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು. ಇದರೊಂದಿಗೆ ಅವರು 'ಛಾವಾ' ಚಿತ್ರದಲ್ಲಿ 'ತಾರಾಬಾಯಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತ 'ಕುಂಕುಮ ಭಾಗ್ಯ' ಮತ್ತು 'ವಾಗ್ಲೆ ಕಿ ದುನಿಯಾ' ಎನ್ನುವ ಜನಪ್ರಿಯ ಸೀರಿಸ್‌ಗಳಲ್ಲೂ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

Edited By :
PublicNext

PublicNext

15/06/2026 02:43 pm

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ