ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 28-05-2026

ಮೇಷ: ಗುರುದೇವರ ಅನುಗ್ರಹ ಪ್ರಾಪ್ತಿಯ ದಿನ. ಉದ್ಯೋಗ ಸ್ಥಾನದಲ್ಲಿ ಉನ್ನತಿಯತ್ತ ಪಯಣ. ಉದ್ಯಮಗಳು ಸಮಾಧಾನದ ಸ್ಥಿತಿಯಲ್ಲಿ. ಕೆಲವರಿಗೆ ಹಠಾತ್‌ ಧನಲಾಭ.

ವೃಷಭ: ಹೊಸ ಹೂಡಿಕೆಗಳ ವಿಷಯದಲ್ಲಿ ಜಾಗ್ರತೆ. ಉದ್ಯೋಗದಲ್ಲಿ ಸ್ವಲ್ಪ ಉತ್ತಮ. ಯುವಜನರಿಗೆ ಕೃಷಿಯಲ್ಲಿ ಹರ್ಷ, ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ಪ್ರಾಪ್ತಿ.

ಮಿಥುನ: ಪ್ರಕೃತಿಯ ಒಡನಾಟ ಹೆಚ್ಚಿದಷ್ಟೂ ಧೈರ್ಯವೃದ್ಧಿ. ಉದ್ಯೋಗ ಸ್ಥಾನದಲ್ಲಿ ದಿಟ್ಟ ಹೆಜ್ಜೆಗಳು. ಉದ್ಯಮ ಅಭಿವೃದ್ಧಿಗೆ ಹರಿದು ಬಂದ ನೆರವು.

ಕರ್ಕಾಟಕ: ಎಣಿಸಿದ್ದಕ್ಕಿಂತ ಸುಲಭವಾದ ಕೆಲಸ ಕಾರ್ಯಗಳು ಅಕಸ್ಮಾತ್‌ ಧನಾಗಮ ಯೋಗ. ಬಂಧುವರ್ಗದಿಂದ ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟದಿಂದ ಉತ್ತಮ ಲಾಭ.

ಸಿಂಹ: ಇನ್ನಷ್ಟು ಆದಾಯ ಮೂಲಗಳು ಗೋಚರಕ್ಕೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಸ್ಥಾನ. ವಿಸ್ತೃತ ಕಾರ್ಯಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿಯ ಅನುಭವ. ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ.

ಕನ್ಯಾ: ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಅನುಕೂಲ ವಾತಾವರಣ.

ತುಲಾ: ಗುರುಸಮಾನರ ಹಿತವಚನದಿಂದ ಧೈರ್ಯವೃದ್ಧಿ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಮಾಧಾನ. ಕಾರ್ಯನಿಷ್ಠ ವ್ಯಕ್ತಿಗಳಿಗೆ ಗೌರವ. ಮಕ್ಕಳಿಂದಾಗಿ ಪೋಷಕರಿಗೆ ಗೌರವ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಹಿತಾನುಭವ. ಸರಕಾರಿ ನೌಕರರಿಗೆ ಕಿರಿಕಿರಿಯಿಂದ ಮುಕ್ತಿ. ಸಹಕಾರಿ ಸಂಸ್ಥೆಗಳ ಸಮಸ್ಯೆ ನಿವಾರಣೆ. ಸಂಸಾರದಲ್ಲಿ ಹಿರಿಯರು, ಗೃಹಿಣಿಯರಿಗೆ ಆನಂದದ ಸನ್ನಿವೇಶ.

ಧನು: ತೊಂದರೆಗಳೆಲ್ಲವೂ ಕ್ಷಣಿಕ. ಸಣ್ಣ ಉದ್ಯಮ ಘಟಕದ ಉತ್ಪಾದನೆ ವೃದ್ಧಿ. ಖಾದಿ ಉಡುಪು ಮಾರಾಟಗಾರರಿಗೆ ಲಾಭ. ಹಿರಿಯರ ಆಸ್ತಿಯಲ್ಲಿ ಕೃಷಿ ಪ್ರಗತಿ.

ಮಕರ: ಗುರುವಾರ ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ಸು. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವರಮಾನ ವೃದ್ಧಿ.

ಕುಂಭ: ಸರಿಸಾಟಿಯಿಲ್ಲದ ಚುರುಕುಬುದ್ಧಿ ಪ್ರದರ್ಶನ. ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ, ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ. ಆಪ್ತರಿಂದ ಸಕಾಲಿಕ ಸಹಾಯದ ಕೊಡುಗೆ.

ಮೀನ: ಮಾಮೂಲಿನಂತೆ ಹಲವು ಕಾರ್ಯಗಳ ಒತ್ತಡ. ಒಂದಕ್ಕಿಂತ ಹೆಚ್ಚು ಕೆಲಸಗಳಿಗೆ ಗಮನ ಹರಿಸುವ ಅನಿವಾರ್ಯತೆ. ಸರಕಾರಿ ನೌಕರರಿಗೆ ಸಮಾಧಾನ ತಂದ ಕೊಡುಗೆ.

Edited By : Vijay Kumar
PublicNext

PublicNext

28/05/2026 08:49 am

Cinque Terre

7.66 K

Cinque Terre

0