ಮೇಷ: ಮಾಮೂಲಿಗಿಂತ ವಿಶಿಷ್ಟವಾದ ರವಿವಾರ ಉದ್ಯೋಗಕ್ಕೆ ವಿರಾಮ, ಸಂಸಾರದ ಕಡೆಗೆ ಗಮನ. ಉದ್ಯಮಿಗಳಿಗೆ ಅನಿರೀಕ್ಷಿತ ಲಾಭ. ಹೊಸ ಕ್ಷೇತ್ರಗಳಿಗೆ ಪಾದಾರ್ಪಣೆ. ದೇವತಾ ಕಾರ್ಯಗಳಲ್ಲಿ ಮಗ್ನತೆ.
ವೃಷಭ: ಅನಿರೀಕ್ಷಿತ ಧನಾಗಮ ಯೋಗ. ಉದ್ಯಮಗಳ ಬೆಳವಣಿಗೆ ಅಬಾಧಿತ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ. ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗೆ ಪ್ರೋತ್ಸಾಹ ಪ್ರಕೃತಿ ಸಂರಕ್ಷಣೆಯ ಕಾರ್ಯಗಳಿಗೆ ಪ್ರೋತ್ಸಾಹ.
ಮಿಥುನ: ವಿರಾಮದ ದಿನ ಅನ್ಯ ಕ್ಷೇತ್ರಗಳತ್ತ ಗಮನ. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು.ಪ್ರಾಮಾಣಿಕ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮಕ್ಕಳ ಜ್ಞಾನ ವಿಸ್ತರಣೆಗೆ ವಿಶೇಷ ವ್ಯವಸ್ಥೆ. ಮನೆಯವರ ಆರೋಗ್ಯ ಉತ್ತಮ.
ಕರ್ಕಾಟಕ: ನಿಯೋಜಿತ ಕಾರ್ಯಗಳ ಸಮರ್ಥ ನಿರ್ವಹಣೆ. ಜ್ಞಾನವೃದ್ಧಿಯ ಪ್ರಯತ್ನಕ್ಕೆ ಪ್ರೋತ್ಸಾಹ. ವಸ್ತ್ರ,, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯ. ಹೋಟೆಲ್ ಉದ್ಯಮಿಗಳಿಗೆ ಹಠಾತ್ ನಷ್ಟ.
ಸಿಂಹ: ಪ್ರಕೃತಿ ಸಹಜ ವಿದ್ಯಮಾನಗಳನ್ನು ವಿರೋಧಿಸದಿರಿ. ಒಡನಾಡಿಗಳ ಸ್ವಾಭಿಮಾನಕ್ಕೆ ಗೌರವ ಸಲ್ಲಲಿ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಹತ್ತಿರದ ದೇವಾಲಯಕ್ಕೆ ಸಂದರ್ಶನ. ಕುಟುಂಬದಲ್ಲಿ ಸರ್ವರಿಗೂ ಆರೋಗ್ಯ ವೃದ್ಧಿ.
ಕನ್ಯಾ: ನಿರ್ದಿಷ್ಟ ಗುರಿಯ ಕಾರ್ಯಗಳ ಮುನ್ನಡೆ. ಉದ್ಯೋಗಕ್ಕೆ ವಿರಾಮವಾದರೂ ಕ್ರಿಯಾಶೀಲತೆಗೆ ಚಾಲನೆ. ಸರಕಾರಿ ಅಧಿಕಾರಿಗಳಿಗೆ ರಜೆಯ ದಿನವೂ ಕಾಟ. ಶಿಕ್ಷಿತರಿಗೆ ಸೂಕ್ತ ಅವಕಾಶಗಳು ಗೋಚರ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.
ತುಲಾ: ಕೊಂಚ ಹಗುರವಾದ ಗೃಹಕೃತ್ಯಗಳ ಹೊರೆ. ಉದ್ಯೋಗಸ್ಥರಿಗೆ ಕೆಲಸ ಮುಗಿದ ಆನಂದ. ಉದ್ಯೋಗಾಸಕ್ತರಿಗೆ ಸೂಕ್ತ ಅವಕಾಶ.ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಅನಿಯೋಜಿತ ಪ್ರಯಾಣದ ಸಾಧ್ಯತೆ.
ವೃಶ್ಚಿಕ: ಇಡೀ ದಿನ ಸಂತೃಪ್ತಿಯ ಅನುಭವ. ಉದ್ಯಮದಲ್ಲಿ ಅಪೂರ್ವ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯಿಂದ ಲಾಭ. ಲೇವಾದೇವಿ, ಸಟ್ಟಾ ವ್ಯವಹಾರದಿಂದ ದೂರವಿರಿ. ಸಂಗೀತ, ಹರಿಕಥೆ ಶ್ರವಣಕ್ಕೆ ಸಮಯ ಮೀಸಲು.
ಧನು: ಉದ್ಯೋಗದ ಚಿಂತೆಗಳಿಗೆ ಈ ದಿನ ವಿದಾಯ. ಪಾಲುದಾರಿಕೆ ಉದ್ಯಮ ಆರಂಭಕ್ಕೆ ವಿಘ್ನ. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಗಳ ಪ್ರಯೋಗ ತೃಪ್ತಿಕರ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಆದಾಯ ಹೆಚ್ಚಳ.
ಮಕರ: ಮನೆಯವರ ಜತೆಯಲ್ಲಿ ವಿರಾಮದ ಆನಂದ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಿದ ತೃಪ್ತಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. ಯಂತ್ರೋಪಕರಣ ಬಿಡಿಭಾಗಗಳಿಗೆ ಬೇಡಿಕೆ.
ಕುಂಭ: ಸಲಹೆಗಳಿಗೆ ಶೀಘ್ರ ಸ್ಪಂದನದಿಂದ ತ್ವರಿತ ಯಶಸ್ಸು. ಉತ್ಪನ್ನಗಳ ಗುಣಮಟ್ಟ ಸುಧಾರಣೆಯಿಂದ ಹೆಚ್ಚಿದ ಬೇಡಿಕೆ. ಯಂತ್ರೋಪಕರಣಗಳ ಖರೀದಿಗೆ ಧನವ್ಯಯ. ಗೃಹೋತ್ಪನ್ನಗಳಿಗೆ ಗ್ರಾಹಕರ ಮೆಚ್ಚುಗೆ. ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಸಾಮರಸ್ಯ ವೃದ್ಧಿ.
ಮೀನ: ಉದ್ಯಮದ ವ್ಯಾಪ್ತಿ ಮತ್ತಷ್ಟು ವಿಸ್ತರಣೆ. ಸಾಮಾಜಿಕ ವಲಯದಲ್ಲಿ ಅನುಕೂಲಕರ ಸ್ಪಂದನ. ಧಾರ್ಮಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿಕರಿಗೆ ಆನಂದ ತರುವ ದಿನ. ಸಂಸಾರದಲ್ಲಿ ನೆಮ್ಮದಿಯ ಅನುಭವ.
PublicNext
31/05/2026 09:04 am