ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಬಡವರ್ಗದ ಜನರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಮಡಿಕೇರಿ: ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಕೊಡಗಿನ ಎಲ್ಲಾ ಭೂಮಿ ಹಾಗೂ ಮನೆ ವಂಚಿತರ ಬೃಹತ್‌ ಪ್ರತಿಭಟನೆ ಮಡಿಕೇರಿಯಲ್ಲಿ ನಡೆಯಿತು. ಮಡಿಕೇರಿ ನಗರದ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿತ್ತು. ಡಿಸಿ ಕಚೇರಿ ಆವರಣದಲ್ಲಿ ಜಮಾಯಿಸಿದ ಐನೂರಕ್ಕೂ ಅಧಿಕ ಸಂಖ್ಯೆಯ ನಿವೇಶನ ರಹಿತರು, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ನಮ್ಮ ಭೂಮಿ ನಮ್ಮ ಹಕ್ಕು, ಭಿಕ್ಷೆಯಲ್ಲ. ಎಲ್ಲಾ ಬಡವರ ಸ್ವಾಭಿಮಾನದ ಬದುಕಿಗಾಗಿ ಭೂಮಿಯ ಹಕ್ಕನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ರು.ಈ‌ ಸಂದರ್ಭದ ಪ್ರತಿಭಟನಾಕಾರರ ಪ್ರಮುಖ ನಾಯಕರು ಮಾತನಾಡಿ ಕೊಡಗು ಜಿಲ್ಲೆಯನ್ನು ದಕ್ಷಿಣದ ಕಾಶ್ಮೀರ ಎಂದು ವರ್ಣಿಸಲಾಗುತ್ತದೆ. ಆದರೆ, ಕೊಡಗಿನಲ್ಲೂ ಒಂದು ಕತ್ತಲೆಯ ಲೋಕವಿದೆ ಮತ್ತು ನಾಗರಿಕತೆ ತಲೆತಗ್ಗಿಸಬೇಕಾದ ಪರಿಸ್ಥಿತಿ ಇದೆ ಎಂಬುದು ಹೊರಜಗತ್ತಿಗೆ ತಿಳಿದಿಲ್ಲ. ಅಂತಹ ಕತ್ತಲ ಲೋಕದಲ್ಲಿರುವ ಆದಿವಾಸಿಗಳು ಬುಡಕಟ್ಟು ಜನರು ಸೇರಿದಂತೆ ಹಲವಾರು ಜನರು ಇಂದಿಗೂ ನಿರಾಶ್ರಿತರು ಇದ್ದಾರೆ. ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಉಳ್ಳವರು ಇದ್ದಾರೆ‌.ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಉಳ್ಳವರು ಇದ್ದಾರೆ ಅಂತಹವರ ಭೂಮಿಯನ್ನು ಬಿಡಿಸಿ ಬಡವರ್ಗದ ಜನರಿಗೆ ಕನಿಷ್ಠ ಐದು ಸೆಂಟ್ ಜಾಗವನ್ನು ಆದರೂ ನೀಡಬೇಕು ಈ‌ ಬಗ್ಗೆ ಹಲವಾರು ವರ್ಷಗಳಿಂದ ಮುಖ್ಯಮಂತ್ರಿ ಅವರ ಕಾರ್ಯದರ್ಶಿಗಳ ಬಳಿ ಪತ್ರ ವ್ಯವಹಾರ ಮಾಡಿದರೂ ಯಾವುದೇ ರೀತಿಯಲ್ಲಿ ಪ್ರಯೋಜನ ಆಗಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು..

Edited By :
Kshetra Samachara

Kshetra Samachara

29/05/2026 10:25 pm

Cinque Terre

560

Cinque Terre

0

ಸಂಬಂಧಿತ ಸುದ್ದಿ