ಅಮೆರಿಕದ ಬಂದರುಗಳ ದಿಗ್ಬಂಧನದ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಇರಾನ್, ಚೀನಾ ಮತ್ತು ಪಾಕಿಸ್ತಾನದೊಂದಿಗೆ ತನ್ನ ವ್ಯಾಪಾರ ಸಂಬಂಧಗಳನ್ನು ಬಲಪಡಿಸಿಕೊಂಡಿದೆ. ಇತ್ತೀಚೆಗೆ ರಷ್ಯಾದ ಸರ್ಕಾರಿ ಮಾಧ್ಯಮ ಆರ್‌ಟಿ ಪ್ರಕಟಿಸಿದ ವೀಡಿಯೊವೊಂದು ಈ ಬೆಳವಣಿಗೆಯನ್ನು ದೃಢಪಡಿಸಿದೆ. ಅಮೆರಿಕದ ನಿರ್ಬಂಧಗಳನ್ನು ತಪ್ಪಿಸಲು ಇರಾನ್, ರೈಲು ಮಾರ್ಗದ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ತೈಲ ಮತ್ತು ಎಲ್‌ಪಿಜಿ ರಫ್ತು ಮಾಡುತ್ತಿದೆ ಎಂದು ವೀಡಿಯೊ ಬಹಿರಂಗಪಡಿಸಿದೆ.
ಈ ಹೊಸ ರೈಲು ಮಾರ್ಗವು ಇರಾನ್ ಮತ್ತು ಚೀನಾ ನಡುವೆ ಕಝಾಕಿಸ್ತಾನ್ ಹಾಗೂ ತುರ್ಕಮೆನಿಸ್ತಾನ್ ಮೂಲಕ ಹಾದುಹೋಗುತ್ತದೆ. ಇದು ಅಮೆರಿಕದ ಯುದ್ಧನೌಕೆಗಳ ವ್ಯಾಪ್ತಿಯನ್ನು ಮೀರಿರುವುದರಿಂದ, ಇರಾನ್‌ಗೆ ತನ್ನ ಸರಕುಗಳನ್ನು ಸುರಕ್ಷಿತವಾಗಿ ಸಾಗಿಸಲು ಮತ್ತು ದಿಗ್ಬಂಧನಗಳ ಪರಿಣಾಮವನ್ನು ತಗ್ಗಿಸಲು ಪರಿಣಾಮಕಾರಿ ಪರ್ಯಾಯ ಮಾರ್ಗವಾಗಿದೆ.
PublicNext
31/05/2026 08:01 am
LOADING...