ಬೆಂಗಳೂರು ಕಟ್ಟಿದ ಮಹಾಪುರುಷ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಹೊತ್ತಿರುವ ಆ ವಾರ್ಡ್‌ನಲ್ಲಿ ಇಂದು ಸಮಸ್ಯೆಗಳ ಆಗರವಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ 'ಕೆಂಪೇಗೌಡ ನಗರ'ದ ನಿವಾಸಿಗಳಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಬೇಸತ್ತ ಜನ ಈ ಬಾರಿ ವೋಟ್ ಹಾಕಲ್ಲ ಎಂದು ರೊಚ್ಚಿಗೆದ್ದಿದ್ದಾರೆ. ಹಾಗಾದ್ರೆ ಅಲ್ಲಿ ಆಗಿರೋ ಅವಾಂತರಗಳೇನು? ಅನ್ನೋ ಡಿಟೈಲ್ ಇಲ್ಲಿದೆ
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ವಾರ್ಡ್ ಹೆಸರು ನಾಡಪ್ರಭು ಕೆಂಪೇಗೌಡ ನಗರ. ಹೆಸರೇನೋ ಅದ್ಧೂರಿಯಾಗಿದೆ, ಆದರೆ ಇಲ್ಲಿನ ವಾಸ್ತವ ಸ್ಥಿತಿ ಮಾತ್ರ ಅತ್ಯಂತ ಭೀಕರವಾಗಿದೆ. ಕಳೆದ 20 ವರ್ಷಗಳ ಹಿಂದೆ ನಿರ್ಮಾಣವಾದ ಚರಂಡಿಗಳು ಇಂದು ಹೂಳು ತುಂಬಿ ಹೋಗಿವೆ. ಸ್ವಲ್ಪ ಮಳೆ ಬಂದರೆ ಸಾಕು, ರಸ್ತೆಗಳು ಕೆರೆಯಂತಾಗುತ್ತವೆ. ಸ್ಯಾನಿಟರಿ ನೀರು ಸರಾಗವಾಗಿ ಹರಿಯದೆ ಜನರ ಮನೆ ಬಾಗಿಲಿಗೆ ಬಂದು ಅಪ್ಪಳಿಸುತ್ತಿದೆ.
ನೋಡಿ ಸರ್, ಮಳೆ ಬಂದ್ರೆ ಸಾಕು ನಮಗೆ ನಿದ್ದೆ ಇರಲ್ಲ. ಚರಂಡಿ ನೀರೆಲ್ಲಾ ಮನೆ ಒಳಗಡೆ ಬರುತ್ತೆ. ಪಾತ್ರೆ-ಪಗಡೆಗಳೆಲ್ಲಾ ಸ್ಯಾನಿಟರಿ ನೀರಲ್ಲಿ ತೇಲುತ್ತೆ. ನೂರು ಸಲ ದೂರು ಕೊಟ್ಟಿದ್ದೀವಿ, ಇಲ್ಲಿನ ಜನರ ಸಂಕಷ್ಟ ಅಷ್ಟಕ್ಕೇ ನಿಲ್ಲಲ್ಲ. ಬಡಾವಣೆಯ ಪ್ರವೇಶ ದ್ವಾರದಲ್ಲೇ ಕಸದ ರಾಶಿ ಸ್ವಾಗತ ಕೋರುತ್ತದೆ. ರಸ್ತೆ ತುಂಬಾ ಗುಂಡಿಗಳು ಬಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಜನರು ಸಮಸ್ಯೆ ಹೇಳಿಕೊಂಡು ಮುಖಂಡರ ಬಳಿ ಹೋದರೆ, ಇದು ನಮ್ಮ ವಾರ್ಡ್ ವ್ಯಾಪ್ತಿಗೆ ಬರಲ್ಲ" ಎನ್ನುವ ಹಾರಿಕೆ ಉತ್ತರ ಸಿಗುತ್ತಿದೆಯಂತೆ. ಅತಂತ್ರ ಸ್ಥಿತಿಯಲ್ಲಿರುವ ಜನರಿಗೆ ಈಗ ಯಾರನ್ನು ಕೇಳಬೇಕು ಎಂಬುದೇ ಅರ್ಥವಾಗುತ್ತಿಲ್ಲ.
ಮತ ಕೇಳೋಕೆ ಮಾತ್ರ ಸಾಲಾಗಿ ಬರ್ತಾರೆ. ಕೆಲಸ ಮಾಡಿ ಅಂದ್ರೆ ಇದು ನಮ್ಮ ವಾರ್ಡ್ ಅಲ್ಲ ಅಂತಾರೆ. 20 ವರ್ಷದಿಂದ ಈ ಚರಂಡಿ ಕ್ಲೀನ್ ಮಾಡಿಲ್ವಂತೆ, ರಸ್ತೆ ತುಂಬಾ ಗುಂಡಿ ಬಿದ್ದಿದೆ. ಪಬ್ಲಿಕ್ ನೆಕ್ಸ್ಟ್ ಕ್ಯಾಮರಾ ಮುಂದೆ ನಮ್ಮ ನೋವು ಹೇಳ್ಕೊಳ್ತಾ ಇದ್ದೀವಿ. ಈ ಬಾರಿ ಯಾರೂ ಈ ಕಡೆ ವೋಟ್ ಕೇಳೋಕೆ ಬರಬೇಡಿ, ನಾವು ಮತದಾನ ಬಹಿಷ್ಕಾರ ಮಾಡ್ತೀವಿ ಅಂತಿದ್ದಾರೆ.
ಗಲೀಜು ನೀರು ಮನೆಗೆ ನುಗ್ಗಿ ರೋಗರುಜಿನಗಳ ಭೀತಿ ಆವರಿಸಿದೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ. ಕೆಂಪೇಗೌಡರ ಹೆಸರಿನ ವಾರ್ಡ್‌ನಲ್ಲಿ ಜನ ನರಕ ಅನುಭವಿಸುತ್ತಿರುವುದು ನಿಜಕ್ಕೂ ದುರಂತ. ಕಸದ ಸಮಸ್ಯೆ ಅಂತ ಬಂದ್ರೆ ಜನ ಕೂಡ ನಿರ್ಲಕ್ಷ್ಯ ತೋರ್ತಿದ್ದಾರೆ ಅನ್ನೋದು ಸ್ಥಳೀಯರು ಆರೋಪ
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕೆಂಪೇಗೌಡ ನಗರದ ಜನತೆ ಈಗ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇವರ ಅಳಲನ್ನು ಕೇಳಿಸಿಕೊಳ್ಳುತ್ತಾರಾ ಅಥವಾ ಮುಂದಿನ ಚುನಾವಣೆಯಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕು.
PublicNext
10/06/2026 07:24 pm