ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ದಾಖಲೆಗೆ ಬಿಜೆಪಿ ಸಂಭ್ರಮ, ಕಾಂಗ್ರೆಸ್‌ನಿಂದ ಟೀಕೆ : ಕೆರಳಿ ಕೆಂಡವಾದ ಖರ್ಗೆ

ದೆಹಲಿ : ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಭಾಜನರಾಗುತ್ತಿದ್ದಾರೆ. ಅತ್ಯಂತ ಸುದೀರ್ಘ ಅವಧಿಗೆ ಆಯ್ಕೆಯಾದ ಪ್ರಧಾನಿ ಎಂಬ ನೆಹರೂ ದಾಖಲೆಯನ್ನು ಮೋದಿ ಸರಿಗಟ್ಟಿದ್ದಾರೆ. ಹೀಗಾಗಿ ಬಿಜೆಪಿ ವಲಯದಲ್ಲಿ ಸಂಭ್ರಮ ಮನೆ ಮಾಡಿದ್ರೆ ಇತ್ತ ಕಾಂಗ್ರೆಸ್‌ ಪ್ರಧಾನಿಯ ಸಾಧನೆಯನ್ನು ಅಣಿಕಿಸಿದೆ.

ಹೌದು ಒಂದು ಕಡೆ ಪ್ರಶಂಸೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ, "ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಬಡವರ ಕೆಲಸದ ಹಕ್ಕನ್ನು ಕಸಿದುಕೊಂಡಿದೆ. ಮನ್ರೇಗಾ ಯೋಜನೆಯಡಿ ಕೆಲಸ ಮಾಡುವ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. 12 ವರ್ಷಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪದೇ ಪದೇ ಹೆಚ್ಚಿಸಿದೆ. ಬಡವರ ಕಣ್ಣೀರಿನ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಮೋದಿ ಸರ್ಕಾರ ಅಧಿಕಾರದ ಅಮಲಿನಲ್ಲಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಮೋದಿ ಸರ್ಕಾರದ 12 ವರ್ಷಗಳ ಅಭಿಯಾನದ ನಿಜವಾದ ಚಿತ್ರಣ ಇದು ಎಂದು ವಿಪಕ್ಷಗಳು ಮತ್ತು ನೆಟ್ಟಿಗರು ಟೀಕಿಸುತ್ತಿದ್ದಾರೆ. ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡುವುದಾಗಿ ಮಾತು ಕೊಡಲಾಗಿತ್ತು.

2016ರಲ್ಲಿ ಪ್ರಧಾನಿ ಮೋದಿ 'ಉಜ್ವಲ ಯೋಜನೆ'ಯನ್ನು ಲಾಂಚ್ ಮಾಡಿದಾಗ, ಬಡ ಮಹಿಳೆಯರನ್ನು ಒಲೆಯ ಹೊಗೆಯಿಂದ ಮುಕ್ತಗೊಳಿಸುವುದಾಗಿ ಘೋಷಿಸಿದ್ದರು. ವರ್ಷಕ್ಕೆ ಸಿಗುತ್ತಿದ್ದ 12 ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ವರ್ಷಕ್ಕೆ 9ಕ್ಕೆ ಇಳಿಸಲಾಗಿತ್ತು.

2026ರ ಹೊತ್ತಿಗೆ ಈಗ ಆ ಸಂಖ್ಯೆಯನ್ನು 9ರಿಂದ ಕೇವಲ 4 ಸಿಲಿಂಡರ್‌ಗಳಿಗೆ ಕಡಿತಗೊಳಿಸಲಾಗಿದೆ. ಅಂದರೆ, ವರ್ಷಕ್ಕೆ ಕೇವಲ 4 ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿ ಸಿಗಲಿದೆ. 12 ಸಿಲಿಂಡರ್ ಕೊಡುವುದಾಗಿ ನಂಬಿಸಿ ಈಗ ಕೇವಲ 4ಕ್ಕೆ ನಿಲ್ಲಿಸಿರುವುದು ಬಡವರ ಬೆನ್ನಿಗೆ ಇರಿದಿದೆ.

ಮತ್ತೆ ಉರುವಲು ಒಲೆಯತ್ತ ಮುಖ ಮಾಡಿದ ಮಹಿಳೆಯರು!ದೇಶಾದ್ಯಂತ ಎಲ್‌ಪಿಜಿ ಗ್ಯಾಸ್ ಬೆಲೆಗಳನ್ನು ಸತತವಾಗಿ ಏರಿಕೆ ಮಾಡಲಾಗುತ್ತಿದೆ. ಸದ್ಯದ ವರದಿಗಳ ಪ್ರಕಾರ, ದೇಶದ ಸುಮಾರು 5.56 ಕೋಟಿ ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ ಇಲ್ಲದೆ ದುಬಾರಿ ಬೆಲೆ ನೀಡಿ ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಬ್ಸಿಡಿಯೂ ಕಡಿತಗೊಂಡಿರುವುದರಿಂದ ಬೇರೆ ದಾರಿ ಕಾಣದೆ, ತಾಯಿ-ಸಹೋದರಿಯರು ಮತ್ತೆ ಹಳೆಯ ಕಟ್ಟಿಗೆ ಒಲೆಗಳ ಹೊಗೆಯಲ್ಲೇ ಬೇಯುವಂತಾಗಿದೆ.

'ಉದ್ಯೋಗದ ಹಕ್ಕು ಕಿತ್ತಾಯ್ತು, ಈಗ ಅನ್ನಕ್ಕೂ ಕುತ್ತು!'ಸರ್ಕಾರದ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೊದಲು 'ಮನರೇಗಾ' (MGNREGA) ಯೋಜನೆಯಡಿ ಸಿಗುತ್ತಿದ್ದ ಉದ್ಯೋಗದ ಹಕ್ಕನ್ನು ಬಡವರಿಂದ ಕಿತ್ತುಕೊಳ್ಳಲಾಯಿತು, ಈಗ ಅವರ ದಿನದ ಅನ್ನ ಬೇಯಿಸುವ ಗ್ಯಾಸ್ ಸಬ್ಸಿಡಿಗೂ ಕತ್ತರಿ ಹಾಕಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಬಡವರ ಕಷ್ಟಗಳನ್ನು ಆಲಿಸಬೇಕಾದ ಸರ್ಕಾರ, ಅಧಿಕಾರದ ಮದದಲ್ಲಿ ಕಣ್ಣೀರು ಸುರಿಸುವ ನಾಟಕವಾಡುತ್ತಿದೆ ಎಂದು ಟೀಕಿಸಿದ್ದಾರೆ.

ಈ ಮಧ್ಯೆ, ಪ್ರಧಾನಿ ಮೋದಿ ಅವರ ಈ ಸಾಧನೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇಗುಲಗಳಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆಗಳನ್ನು ಸಲ್ಲಿಸಲಿದ್ದಾರೆ.

Edited By : Nirmala Aralikatti
PublicNext

PublicNext

10/06/2026 02:22 pm

Cinque Terre

29.54 K

Cinque Terre

6

ಸಂಬಂಧಿತ ಸುದ್ದಿ