ಬೆಂಗಳೂರು : ವಿಶ್ವದ ಶ್ರೇಷ್ಠ ಕ್ರಿಕೆಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರ ಅದ್ಭುತ ಫಿಟ್‌ನೆಸ್ ಹಿಂದೆ ಒಂದು ಪವರ್‌ಫುಲ್ ಸಲಾಡ್ ಅಡಗಿದೆ. ದೆಹಲಿಯ ಅವರ 'ಒನ್8 ಕಮ್ಯೂನ್' ರೆಸ್ಟೋರೆಂಟ್‌ನಲ್ಲಿಯೂ ಭಾರಿ ಫೇಮಸ್ ಆಗಿರುವ ಈ 'ಸೂಪರ್‌ಫುಡ್ ಸಮ್ಮರ್ ಸಲಾಡ್' ಅನ್ನು ಮನೆಯಲ್ಲೇ ಸುಲಭವಾಗಿ ಹೇಗೆ ಮಾಡುವುದು ಎಂದು ನೋಡೋಣ…..
ರಾಕೆಟ್ ಎಲೆಗಳು (1 ಕಪ್), ಪಫ್ಡ್ ಕ್ವಿನೋವಾ (1/4 ಕಪ್), ಹುರಿದ ಕ್ಯಾಪ್ಸಿಕಂ (1/4 ಕಪ್), ಕತ್ತರಿಸಿದ ಕಲ್ಲಂಗಡಿ (1 ಸಣ್ಣ ಬಟ್ಟಲು), ಕುಂಬಳಕಾಯಿ ಬೀಜಗಳು (2 ಚಮಚ), ಗೋಡಂಬಿ (2 ಚಮಚ).
ಡ್ರೆಸ್ಸಿಂಗ್ ಪದಾರ್ಥಗಳು:
ಆಲಿವ್ ಎಣ್ಣೆ (2 ಚಮಚ), ವಿನೆಗರ್ (1 ಚಮಚ), ಜೇನುತುಪ್ಪ (1 ಚಮಚ), ಸಾಸಿವೆ ಸಾಸ್ (1 ಚಮಚ), ಮೆಣಸಿನಕಾಯಿ ಸಾಸ್ (1/4 ಚಮಚ), ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ದೊಡ್ಡ ಬಟ್ಟಲಿನಲ್ಲಿ ರಾಕೆಟ್ ಎಲೆಗಳು, ಬೇಯಿಸಿದ ಕ್ವಿನೋವಾ, ಸಣ್ಣದಾಗಿ ಕತ್ತರಿಸಿದ ಹುರಿದ ಕ್ಯಾಪ್ಸಿಕಂ ಮತ್ತು ಕಲ್ಲಂಗಡಿ ತುಂಡುಗಳನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ. ಸಲಾಡ್ ಡ್ರೆಸ್ಸಿಂಗ್‌ಗಾಗಿ ನಿಗದಿಪಡಿಸಿದ ಎಲ್ಲಾ ಸಾಸ್ ಮತ್ತು ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಸಲಾಡ್ ಮೇಲೆ ಸುರಿಯಿರಿ.
ಕೊನೆಯಲ್ಲಿ ಕುಂಬಳಕಾಯಿ ಬೀಜ ಹಾಗೂ ಪುಡಿಮಾಡಿದ ಗೋಡಂಬಿಗಳನ್ನು ಮೇಲಿಂದ ಉದುರಿಸಿ ಬಡಿಸಿ.
ಈ ಸಲಾಡ್‌ನಲ್ಲಿ ಬಳಸಿರುವ ಕ್ವಿನೋವಾ ದೇಹಕ್ಕೆ ಬೇಕಾದ ಎಲ್ಲಾ 9 ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಒಂದು ಸಂಪೂರ್ಣ ಪ್ರೋಟೀನ್ ಮೂಲವಾಗಿದೆ. ಇದು ಸಸ್ಯಾಹಾರಿಗಳಿಗೆ ಅತ್ಯುತ್ತಮ ಆಹಾರವಾಗಿದ್ದು, ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿ ಮತ್ತು ತಾಜಾವಾಗಿ ಇಡಲು ಸಹಾಯ ಮಾಡುತ್ತದೆ.
ವಿರಾಟ್ ಕೊಹ್ಲಿ ಅವರ ದೆಹಲಿಯ 'ಒನ್8 ಕಮ್ಯೂನ್' ರೆಸ್ಟೋರೆಂಟ್‌ನಲ್ಲಿಯೂ ಇದು ಅತ್ಯಂತ ಜನಪ್ರಿಯ ಮೆನು ಆಗಿದೆ.
PublicNext
11/06/2026 09:37 am