ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಸಿದ್ದರಾಮಯ್ಯ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರು ಮೊಸಳೆ ಕಣ್ಣೀರು ಹಾಕ್ತಿದ್ದಾರೆ - ಸಚಿವ ರಾಮಲಿಂಗಾ ರೆಡ್ಡಿ

ಕೋಲಾರ: ರಾಜ್ಯದ ಸ್ಟಿಂಗ್ ಜಟಾಪಟಿ ಸಂಬಂಧ ಕೋಲಾರದಲ್ಲಿ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ರಾಜಕೀಯ ಪಕ್ಷಗಳಲ್ಲಿ ಯಾರು ಈ ರೀತಿಯ ಕೆಲಸ ಮಾಡಬಾರದು.ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಹೊಲಸು ಹೆಚ್ಚಾಗಿದೆ. ದೇಶದಲ್ಲೂ ಇಂತಹ ಬೆಳವಣಿಗೆ ಹೆಚ್ಚುತ್ತಿದೆ, ಇದು ಆಗಬಾರದು, ಯಾರೇ‌ ಮಾಡಿದ್ರು ತಪ್ಪು. ಸ್ಟಿಂಗ್ ಮಾಡಿರೋರ ವಿರುದ್ಧ ಕ್ರಮಕ್ಕೆ ಗೃಹ ಮಂತ್ರಿಗಳು ಪ್ರತಿಕ್ರಿಯೆ ನೀಡುತ್ತಾರೆ. ಇತ್ತೀಚೆಗೆ ಕೆಲವ್ರು, ಮಾಜಿ ಸಿಎಂ ಸಿದ್ದರಾಮಯ್ಯನ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇರಬಹುದು, ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ರಾಜ್ಯದಲ್ಲಿ 2008 ರವರೆಗೂ ರಾಜಕೀಯ ಸೌಹಾರ್ದಯುತವಾಗಿತ್ತು. ಆನಂತರ ರಾಜಕೀಯ ಕೆಟ್ಟಿದೆ. ಬಿಜೆಪಿಯವರು ಎರಡು ಸಲ ಅಧಿಕಾರ ನಡೆಸಿದಾಗ .ಹಿಂಬಾಗಿಲಿನಿಂದ ಅಧಿಕಾರ ಹಿಡಿದರು. ಸಿದ್ದರಾಮಯ್ಯ ಅವರು ಏಕಾಂಗಿಯಲ್ಲ ನಾವೆಲ್ಲ ಅವರ ಜೊತೆಗಿದ್ದೇವೆ ಎಂದಿದ್ದಾರೆ.

Edited By : Vinayak Patil
PublicNext

PublicNext

19/10/2026 06:32 pm

Cinque Terre

6.64 K

Cinque Terre

0