ರಾಮನಗರ : ಹೊರವಲಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ರಾಮದೇವರ ಬೆಟ್ಟದಲ್ಲಿ ಎಣ್ಣೆ ಪಾರ್ಟಿ ಭರ್ಜರಿಯಾಗಿ ನಡೆದಿದೆ. ರಣಹದ್ದು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿರುವ ರಾಮದೇವರ ಬೆಟ್ಟದ ಮೇಲೆಯೇ ಅರಣ್ಯ ಇಲಾಖೆ ಸಿಬ್ಬಂದಿಗೆ ಹಣ ನೀಡಿ ಪ್ರವಾಸಿಗರು ಮದ್ಯ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನಿಂದ ಟಿಟಿ ವಾಹನದಲ್ಲಿ ಬಂದಿದ್ದ 10ಕ್ಕೂ ಹೆಚ್ಚು ಪ್ರವಾಸಿಗರು ಬೆಟ್ಟದ ಮೇಲೆ ಮದ್ಯ ತಂದು ಕುಡಿಯಲು ಅವಕಾಶ ಕೊಟ್ಟವರು ಯಾರು ಎಂಬ ಪ್ರಶ್ನೆ ಎದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ ಕೂಡ ಜೋರಾಗಿಯೇ ಇದೆ.
PublicNext
20/10/2026 08:58 am
LOADING...