ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಖಲೆಯಿಲ್ಲದೆ ಲಾರಿಯಲ್ಲಿ ಸಾಗಿಸ್ತಿದ್ದ 300 ಮೂಟೆ ಅಕ್ಕಿ ಪತ್ತೆ!

ಕೋಲಾರ : ಕೋಲಾರ ಜಿಲ್ಲೆ ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಡ್ಯದಿಂದ ಆಂಧ್ರದ ಪಲಮನೇರು ತಾಲೂಕಿಗೆ ಸಾಗಾಟ ಮಾಡ್ತಿದ್ದ ಅಕ್ಕಿ ಜಪ್ತಿ ಮಾಡಲಾಗಿದೆ. ಮಂಡ್ಯದ MN ಆಗೋ ರೈಸ್ ಇಂಡಸ್ಟ್ರೀಸ್ ನಿಂದ ಸಾಗಾಟ ಮಾಡ್ತಿದ್ದ ಅಕ್ಕಿ ಅಂತ ತಿಳಿದು ಬಂದಿದೆ. ಅವಧಿ ಮೀರಿದ & ಮುರಿದ ಅಕ್ಕಿ ಎಂಬ ದಾಖಲೆ ಇರಿಸಿಕೊಂಡು ಪರಿಪೂರ್ಣ ಅಕ್ಕಿ ಸಾಗಾಟ ಆರೋಪ ಮಾಡಲಾಗಿದೆ.

ಇನ್ನು 32 ಟನ್ ತೂಕದಷ್ಟು ಅಕ್ಕಿಗೆ ಸೂಕ್ತ ದಾಖಲೆ ಇಲ್ಲದ ಕಾರಣ ಲಾರಿ ಸಮೇತ ಅಕ್ಕಿ ಸೀಜ್ ಮಾಡಲಾಗಿದ್ದು ಲಾರಿ ಚಾಲಕ ಸಂತೋಷನನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Edited By :
PublicNext

PublicNext

27/10/2026 04:09 pm

Cinque Terre

6.95 K

Cinque Terre

0

ಸಂಬಂಧಿತ ಸುದ್ದಿ