ಬೀದರ್ : ಕೈಚೀಲದಲ್ಲಿ ಒಂದು ದಿನದ ನವಜಾತ ಶಿಶುವನ್ನು ದುರುಳರು ಬಿಸಾಡಿ ಹೋಗಿದ್ದಾರೆ. ಬೀದರ್ ತಾಲೂಕಿನ ಮರಖಲ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ.
ಮಗುವಿಗೆ ಬಟ್ಟೆ ಸುತ್ತಿ ಕೈಚೀಲದಲ್ಲಿ ಹಾಕಿ ರಸ್ತೆ ಬದಿ ಎಸೆದು ಪರಾರಿ ಆಗಿದ್ದಾರೆ. ಬೀದರ್-ಔರಾದ್ ರಾಜ್ಯ ಹೆದ್ದಾರಿಯ ಪಕ್ಕ ಮಗು ಬಿಸಾಡಿ ಹೋದ ಅಪರಿಚಿತರ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ರಸ್ತೆ ಬದಿ ಬಿದ್ದಿದ್ದ ಶಿಶುವನ್ನು ಕಂಡು ಗ್ರಾಮಸ್ಥರು ಆಘಾತ ಆಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಶಿಶುವಿನ ಪೋಸ್ಟ್‌ಮಾರ್ಟಂ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ಜನವಾಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಮರಖಲ ಗ್ರಾಮಸ್ಥರ ಆಗ್ರಹ ಕೇಳಿ ಬಂದಿದೆ.
PublicNext
29/10/2026 05:51 pm
LOADING...