ರಾಯಚೂರು: ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ಪದವಿ ಇಲ್ಲದೇ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದವರಿಗೆ ಶಾಕ್ ಕೊಟ್ಟಿದೆ. ಪರವಾನಿಗೆ ಇಲ್ಲದೆ ಬೇರೆಯವರ ಹೆಸರಿನ ಮೇಲೆ ನಡೆಸುತ್ತಿರುವ ಮೆಡಿಕಲ್ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಲಾಗಿದೆ.
ಇಂಜೆಕ್ಷನ್ ಮತ್ತು ಔಷಧಿಗಳನ್ನು ಮಾಡುತ್ತಿರುವ ನಕಲಿ ವೈದ್ಯರ ವಿರುದ್ಧ FIR ದಾಖಲು ಮಾಡಲಾಗಿದೆ. ಜಿಲ್ಲೆಯಾದ್ಯಂತ 250 ನಕಲಿ ಕ್ಲಿನಿಕ್ ಹಾಗೂ ಮೆಡಿಕಲ್ ಗಳಿಗೆ ನೋಟಿಸ್ ನೀಡಲಾಗಿದೆ. ಲಿಂಗಸೂರು ತಾಲೂಕಿನ ಆನೆಹೋಸೂರು ಗ್ರಾಮದಲ್ಲಿ ದಾಳಿ ವೇಳೆ ರಾಶಿ ರಾಶಿ ಇಂಜೆಕ್ಷನ್ ಗಳು ಪತ್ತೆ ಆಗಿದೆ. ಯಾವುದೇ ಅರ್ಹತೆ ಇಲ್ಲದಿರುವವರು ಇಂಜೆಕ್ಷನ್ ಮಾಡುತ್ತಿದ್ದಾರೆ!
ಜಿಲ್ಲೆಯಾದ್ಯಂತ ನಕಲಿ ವೈದ್ಯರು ಮತ್ತು ಮೆಡಿಕಲ್ ಗಳ ಪಟ್ಟಿ ನಮ್ಮ ಬಳಿ ಇದೆ. ಕೂಡಲೇ ಪ್ರಾಕ್ಟೀಸ್ ಮಾಡುವುದನ್ನು ಬಿಟ್ಟು ಹೋಗಿ ಎಂದು ಡಿಹೆಚ್ ಒ ಡಾ.ನಂದಿತಾ ವಾರ್ನಿಂಗ್ ಕೊಟ್ಟಿದ್ದಾರೆ.
PublicNext
01/11/2026 06:14 pm
LOADING...