ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ​ಬಿಂಡಿಗ ದೇವೀರಮ್ಮ ಜಾತ್ರಾ ಮಹೋತ್ಸವ: ಮದ್ಯ ಮಾರಾಟ ನಿಷೇಧಿಸಿ ಡಿಸಿ ಆದೇಶ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಬಿಂಡಿಗ ದೇವೀರಮ್ಮ ಜಾತ್ರಾ ಮಹೋತ್ಸವವು ನವೆಂಬರ್ 7 ರಿಂದ ಪ್ರಾರಂಭಗೊಳ್ಳಲಿದ್ದು, ಭಕ್ತರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಾತ್ರೆಯ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.

ದೇವಿಯ ದರ್ಶನಕ್ಕಾಗಿ ನವೆಂಬರ್ 7 ರಂದು ಬೆಳಿಗ್ಗೆ 10:30 ರಿಂದ ಸಂಜೆ 5:00 ಗಂಟೆಯವರೆಗೆ ಹಾಗೂ ನವೆಂಬರ್ 8 ರ ಭಾನುವಾರ ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ. ಈ 2 ದಿನಗಳ ಕಾಲ ಭಕ್ತರು ವಿವಿಧ ಮಾರ್ಗಗಳ ಮೂಲಕ ಭಕ್ತಿಭಾವದಿಂದ ಬೆಟ್ಟ ಹತ್ತಿ ದರ್ಶನ ಪಡೆಯಲಿದ್ದಾರೆ ಹಾಗೂ ದೇವೀರಮ್ಮ ಬೆಟ್ಟದಲ್ಲಿ ಅಭಿಷೇಕದ ನಂತರ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿವೆ.

ದೇವೀರಮ್ಮನ ಬೆಟ್ಟವು ಅತ್ಯಂತ ಎತ್ತರ ಹಾಗೂ ಕಡಿದಾದ ಮಾರ್ಗವನ್ನು ಹೊಂದಿರುವುದರಿಂದ, ಕೆಲವರು ಮದ್ಯಪಾನ ಮಾಡಿ ಬೆಟ್ಟ ಹತ್ತುವುದರಿಂದ ಆಯತಪ್ಪಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿರುತ್ತವೆ. ಇದರ ಜೊತೆಗೆ, ಮದ್ಯದ ಅಮಲಿನಲ್ಲಿರುವ ವ್ಯಕ್ತಿಗಳು ಇತರ ಭಕ್ತರು, ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ನೆಮ್ಮದಿ ಕದಡುವ ಅಪಾಯವಿರುವುದರಿಂದ ಜಿಲ್ಲಾಡಳಿತ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಾರ್ವಜನಿಕರ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನವೆಂಬರ್ 7 ರ ಬೆಳಿಗ್ಗೆ 6:00 ಗಂಟೆಯಿಂದ ನವೆಂಬರ್ 8 ರ ರಾತ್ರಿ 11:00 ಗಂಟೆಯವರೆಗೆ ಈ ಕಟ್ಟುನಿಟ್ಟಿನ ನಿಷೇಧ ಜಾರಿಯಲ್ಲಿರಲಿದೆ.

ಈ ಆದೇಶದನ್ವಯ ಮಲ್ಲೇನಹಳ್ಳಿ, ಹೊಸಪೇಟೆ ಗ್ರಾಮಗಳು ಹಾಗೂ ಕೈಮರ ಸೇರಿದಂತೆ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸಿಎಲ್ 2, 4, 6ಎ, 7, 9, 11 ಹಾಗೂ 14 ಸೇರಿದಂತೆ ಎಲ್ಲಾ ನಮೂನೆಯ ಮದ್ಯದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಸೂಚಿಸಲಾಗಿದೆ. ಈ ನಿಷೇಧಿತ ಅವಧಿಯಲ್ಲಿ ಯಾವುದೇ ರೀತಿಯ ಮದ್ಯ, ಬಿಯರ್ ಹಾಗೂ ಇತರ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

04/11/2026 07:27 pm

Cinque Terre

540

Cinque Terre

0

ಸಂಬಂಧಿತ ಸುದ್ದಿ